ಮೈಸೂರು: ಬಿಜೆಪಿಯಿಂದ ಮೀಸಲಾತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ‘ಸಂವಿಧಾನ ಬಚಾವೋ, ದೇಶ್ ಬಚಾವೋ’ ಹೆಸರಲ್ಲಿ ಮೈಸೂರಿನ ಪುರಭವನದ ಮುಂಭಾಗ ಕಾಂಗ್ರೆಸ್ ಧರಣಿ ನಡೆಸಿದೆ.
ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಸಂವಿಧಾನದ ಮಾನ್ಯತೆ ಇಲ್ಲದ ರೀತಿ ಮೀಸಲಾತಿ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಮೀಸಲಾತಿ ಹೆಚ್ಚಳವೇ ಅವೈಜ್ಞಾನಿಕ. ಚುನಾವಣೆಗಾಗಿ ಬಿಜೆಪಿ ಈ ಗಿಮಿಕ್ ಮಾಡಿದೆ. ಆದರೆ ಮೀಸಲಾತಿ ಹೆಚ್ಚಳ ಬಿಜೆಪಿಗೆ ತಿರುಗುಬಾಣ ಆಗಲಿದೆ ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್, ತನ್ವೀರ್ ಸೇಠ್ ಪ್ರತಿಭಟನೆಯಲ್ಲಿದ್ದರು.