“ಸಂಯುಕ್ತ ಕರ್ನಾಟಕ’ ವರದಿಗಾರನಿಗೆ ಡಾಕ್ಟರೇಟ್‌

0
22

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ೭೩ನೇ ಘಟಿಕೋತ್ಸವದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಧಾರವಾಡದ ಹಿರಿಯ ವರದಿಗಾರ ವಿಶ್ವನಾಥ ಕೋಟಿ ಅವರಿಗೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಪಿಎಚ್ ಡಿ ಪ್ರದಾನ ಮಾಡಿದರು.
ಮೂಲತಃ‌ ಜಿಲ್ಲೆಯ ರಾಮದುರ್ಗ ತಾಲೂಕು ಚಿಕ್ಕೊಪ್ಪ (ಕೆ.ಎಸ್) ಗ್ರಾಮದವರಾದ ವಿಶ್ವನಾಥ ಕೋಟಿ “ಮೊಬೈಲ್ ಆಧಾರಿತ ಪತ್ರಿಕೋದ್ಯಮ: ಸವಾಲುಗಳು ಮತ್ತು ಅವಕಾಶಗಳು” ಮಹಾಪ್ರಬಂಧ‌ ಮಂಡಿಸಿದ್ದಾರೆ. ಪತ್ರಿಕೋದ್ಯಮ ಹಾಗೂ ಸಮೂಹ‌ ಸಂವಹನ‌ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್. ಎಂ. ಮಾಲಗತ್ತಿ ಅವರು ಮಾರ್ಗದರ್ಶನ ಮಾಡಿದ್ದಾರೆ.

Previous articleಕಾವೇರಿ ನೀರು: ಕರ್ನಾಟಕಕ್ಕೆ ಶಾಕ್
Next articleನವೆಂಬರ್ 01 ರಂದು ಗರಡಿ: ಟ್ರೇಲರ್ ಅನಾವರಣ ಮಾಡಲಿರುವ ದರ್ಶನ್