Home News ಶ್ರೀರಾಮನ ತೊಡೆ ಮೇಲೆ ಕಾಲಿಟ್ಟ ಬಿಜೆಪಿ ಶಾಸಕ..!

ಶ್ರೀರಾಮನ ತೊಡೆ ಮೇಲೆ ಕಾಲಿಟ್ಟ ಬಿಜೆಪಿ ಶಾಸಕ..!

ರಾಮನ ಮೂರ್ತಿಯ ಮೇಲೆ ಕಾಲಿಟ್ಟು ಬಿಜೆಪಿ ಶಾಸಕರೊಬ್ಬರು ಫೋಟೊಗೆ ಪೋಸ್‌ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ಬಸವಕಲ್ಯಾಣದಲ್ಲಿ ನಡೆದ ರಾಮನವಮಿ ಶೋಭಾಯಾತ್ರೆ ವೇಳೆ, ಶಾಸಕ ಶರಣು ಸಲಗರ ಶ್ರೀರಾಮನ ಮೂರ್ತಿಯ ತೊಡೆಯ ಮೇಲೆ ನಿಂತು ಕೊರಳಿಗೆ ಹಾರ ಹಾಕಿ ಫೋಟೋವೊಂದಕ್ಕೆ ಫೋಸ್‌ ನೀಡಿದ್ದಾರೆ. ಈ ಫೋಟೋವನ್ನು ಟ್ವೀಟರ್‌ನಲ್ಲಿ ಕಾಂಗ್ರೆಸ್‌ ಹಂಚಿಕೊಂಡಿದ್ದು, ರಾಮ ಮೂರ್ತಿಯ ಮೇಲೆಯೇ ಕಾಲಿಟ್ಟ ಬಿಜೆಪಿ ಶಾಸಕ ಶರಣು ಸಲಗರ ಅವರ ರಾಮಭಕ್ತಿ ಹೀಗಿದೆ!. ಬಿಜೆಪಿಗೆ ‘ರಾಮ’ ಎಂದರೆ ಚುನಾವಣಾ ರಾಜಕೀಯದ ಸರಕು ಹೊರತು ನೈಜ ಭಕ್ತಿಯಲ್ಲ. ಬಿಜೆಪಿಯ ಭಯಂಕರ ಧರ್ಮರಕ್ಷಕರಾದ ಸಿ.ಟಿ. ರವಿ, ಶೋಭಾ ಕರಂದ್ಲಾಜೆ, ತೇಜಸ್ವಿಸೂರ್ಯ, ನಳೀನ್‌ಕುಮಾರ ಕಟೀಲ್‌ ಅವರುಗಳು ರಾಮನಿಗಾದ ಈ ಅಪಚಾರದ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ? ಎಂದು ಪ್ರಶ್ನಿಸಿದೆ.

Exit mobile version