ಶ್ರವಣ್ ಕುಮಾರ ಐಎಎಸ್ ಪರೀಕ್ಷೆಯಲ್ಲಿ ಸಾಧನೆ

0
23

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದ ಯುವಕ ಪೂಜಾರಿ ಶ್ರವಣ್ ಕುಮಾರ ಅವರು ಐಎಎಸ್ ಪರೀಕ್ಷೆಯಲ್ಲಿ 222ನೇ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಲ್ಲೂರು ಗ್ರಾಮದ ರಾಘವೇಂದ್ರರಾವ್ ಹಾಗೂ ಲಲಿತಾ ರಾವ್ ಅವರ ಪುತ್ರರಾದ ಪಿ.ಶ್ರವಣಕುಮಾರ ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಭಾರತ ಆಡಳಿತ ಸೇವಾ( ಐಎಎಸ್) ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈಗಾಗಲೇ ಶ್ರವಣ್ ಕುಮಾರ ಅವರು ಭಾರತ
ಕಂದಾಯ ಸೇವೆ(ಐಆರ್‌ಎಸ್)ನಲ್ಲಿ ಆಯ್ಕೆಯಾಗಿದ್ದು, ತರಬೇತಿಯನ್ನು ಪಡೆಯುತ್ತಿದ್ದರು. 1995ರಲ್ಲಿ ಜನಿಸಿದ ಶ್ರವಣ್ ಕುಮಾರ್ ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು, ಆಂಧ್ರ ಪ್ರದೇಶದ ವಿಶಾಖಪಟ್ಟಣಂ, ಕುದುರೆಮುಖ, ಆರ್ಕೋನಮ್‌ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಪ್ರೌಢ ಶಿಕ್ಷಣವನ್ನು ಒರಿಸ್ಸಾ ರಾಜ್ಯದ ಕಾನೀಯದಲ್ಲಿ ಪೂರೈಸಿದ್ದಾರೆ. ಪದವಿ ಪೂರ್ವ ಶಿಕ್ಷಣವನ್ನು ತೆಲಂಗಾಣ ರಾಜ್ಯ ಹೈದರಾಬಾದ್‌ನಲ್ಲಿ ಪೂರ್ಣಗೊಳಿಸಿ ಬೆಂಗಳೂರಿ ಆರ್.ವಿ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣ ಪೂರ್ಣಗೊಳಿಸಿ, ಇಲ್ಲಿಯೇ ಬಿ.ಟೆಕ್ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
ಪದವಿ ಶಿಕ್ಷಣ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಆಗಬೇಕೆಂಬ ಗುರಿಯನ್ನು ಹೊಂದಿದ್ದರು. ಶ್ರವಣ್ ಕುಮಾರ್ ಎಂಜನಿಯರ್ ಶಿಕ್ಷಣ ಪೂರ್ಣಗೊಳ್ಳುತ್ತಿರುವ ವೇಳೆಯಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಲು ಆರಂಭಿಸಿದ್ದರು. ಎರಡು ಬಾರಿ ಪರೀಕ್ಷೆಯಲ್ಲಿ ಐಆರ್‌ಎಸ್ ಅಧಿಕಾರಿಯಾಗಿ ಆಯ್ಕೆಗೊಂಡಿದ್ದರು. ಪುನಃ ಪಿ.ಶ್ರವಣ್ ಕುಮಾರ ಅವರು ಪಿಯುಎಸ್‌ಸಿ ಪರೀಕ್ಷೆಯನ್ನು ಬರೆದು ಐಎಎಸ್‌ಗೆ ಆಯ್ಕೆಯಾಗುವ ಮಹತ್ವದ ಸಾಧನೆ ಮಾಡಿದ್ದಾರೆ. ಶ್ರವಣ್‌ಕುಮಾರ ಅವರ ತಂದೆ ಕಳೆದ ಎರಡು ದಶಕಗಳಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ನಲ್ಲಿ ಕರ್ತವ್ಯ ಹೈದರಾಬ್‌ನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶ್ರವಣ್ ಕುಮಾರ ಸಾಧನೆಗೆ ಕಲ್ಲೂರು ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.

Previous articleಧಾರವಾಡದ ಕುವರ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ‍್ಯಾಂಕ್
Next articleಜಿಮ್ ಮಾಲಿಕ ಆತ್ಮಹತ್ಯೆ