ಮೈಸೂರು: ಶ್ಯಾನುಭೋಗರ ಮಾತು ಕೇಳಿದ್ದರೆ ನಾನು ಲಾಯರ್ ಆಗುತ್ತಿರಲಿಲ್ಲ, ಸಿಎಂ ಕೂಡ ಆಗುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಓದುತ್ತಿದ್ದ ಕಾಲದಲ್ಲಿಯೇ ಕೆಳ ಜಾತಿಯವರು ವಕೀಲರಾಗುವುದು ಬೇಡ ಎಂದು ನಮ್ಮೂರಿನ ಚೆನ್ನಪ್ಪಯ್ಯ ಹೇಳುತ್ತಿದ್ದರು. ಆ ಶಾನುಭೋಗರನ್ನ ನಮ್ಮಪ್ಪ ಕೇಳಿದಾಗ ಆವಾಗ ಕುರುಬರು ಲಾಯರ್ ಓದಬಾರದು ಎಂದು ಅವರು ಹೇಳಿದ್ದರು. ಅವರ ಮಾತು ಕೇಳಿ ನಮ್ಮಪ್ಪ ನನಗೆ ಲಾಯರ್ ಓದಬೇಡ ಅಂದರು. ಅವರ ಮಾತು ಕೇಳಿದ್ದರೆ ನಾನು ಲಾಯರ್ ಆಗಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯದ ಮುಖ್ಯಮಂತ್ರಿ ಕೂಡ ಆಗುತ್ತಿರಲಿಲ್ಲ. ಅಂತಹ ಪಟ್ಟಭದ್ರ ಹಿತಾಶಕ್ತಿಗಳು ಎಲ್ಲಾ ಕಾಲದಲ್ಲೂ ಇವೆ ಎಂದರು.