ಶೆಟ್ರು ಪಕ್ಷ ಬಿಡ್ತೀನಿ ಅಂತಾ ಹೇಳಿದ್ದಾರಾ ನಿಮ್ಗೆ? ನನ್ಗೇನೂ ಹೇಳಿಲ್ಲ: ಸಚಿವ ಜೋಶಿ

0
7

ಹುಬ್ಬಳ್ಳಿ : ಜಗದೀಶ ಶೆಟ್ಟರ ಅವರಿಗೆ ಟಿಕೆಟ್ ಕೊಡುವ ವಿಚಾರ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಟಿಕೆಟ್ ಸಿಗುವ ವಿಶ್ವಾಸವಿದೆ. ಪಕ್ಷದ ಹೈ ಕಮಾಂಡ್ ಜೊತೆಗೆ ಮಾತನಾಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಜಗದೀಶ ಶೆಟ್ಡರ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶೆಟ್ಟರ ಅವರು ಪಕ್ಣ ಕಟ್ಟಲು ಮಾಡಿದ ಶ್ರಮವನ್ನು ಯಾರೂ ಅಲ್ಲಗಳೆಯುವುದಿಲ್ಲ. ಕಷ್ಡ ಕಾಲದಲ್ಲೂ ಪಕ್ಷವನ್ನು ಗಟ್ಟಿಯಾಗಿ ಬೆಳೆಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಹೈ ಕಮಾಂಡ್ ಗಮನಕ್ಕೆ ತರಲಾಗಿದೆ. ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಜೋಶಿ ಭರವಸೆ ವ್ಯಕ್ತಪಡಿಸಿದರು. ಅವರಿಗೆ ಟಿಕೆಟ್ ಸಿಗುತ್ತಾ? ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಾರಂತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಜೋಶಿ, ಶೆಟ್ಟರ್ ಅವರು ಪಕ್ಷ ಬಿಡುತ್ತೇನೆ ಎಂದು ನಿಮಗೆ ಹೇಳಿದ್ದಾರಾ? ನನಗೇನೂ ಹೇಳಿಲ್ಲ ಎಂದು ನುಡಿದರು.

Previous articleಚುನಾವಣಾ ಅಕ್ರಮಗಳ ಮೇಲೆ ಹದ್ದಿನಕಣ್ಣು: “ನ್ಯಾಯಸಮ್ಮತ ಚುನಾವಣೆ-ನಮ್ಮ ಜವಾಬ್ದಾರಿ”
Next articleಅಥಣಿ ಹೆಸ್ಕಾಂ ಕಚೇರಿ ಎದುರು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಧರಣಿ