ಹುಬ್ಬಳ್ಳಿ: ಸಚಿವರ ವಿರುದ್ಧ ಶಾಸಕರು ದಂಗೆ ಎದ್ದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಶಾಸಕರಿಂದ ಯಾವುದೇ ದೂರು ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆಯಾಗಿ ಕೇವಲ ಎರಡು ತಿಂಗಳಾಗಿದೆ. ಸಣ್ಣ ಪುಟ್ಟ ಅಸಮಾಧಾನಗಳು ಸಹಜ. ಆದರೆ, ದೂರು ನೀಡುವಷ್ಟು ಅಸಮಾಧಾನ ನಮ್ಮಲ್ಲಿಲ್ಲ ಎಂದರು.
ಶಾಸಕರು, ಶಾಸಕಾಂಗ ಸಭೆ ಕರೆಯುವಂತೆ ಒತ್ತಾಯಿಸುತ್ತಿದ್ದಾರೆ. ಕಳೆದ ವಾರವೇ ಸಭೆ ಕರೆಯಬೇಕಿತ್ತು. ಆದರೆ, AICC ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮನದ ಹಿನ್ನಲೆಯಲ್ಲಿ ಮತ್ತು ಅವರೇ ಸಭೆ ನಡೆಸುವುದಾಗಿ ಹೇಳಿದ್ದರು. ಹೀಗಾಗಿ ಸಭೆ ನಡೆದಿಲ್ಲ. ಗುರುವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ.
ಸರ್ಕಾರ ಅತಂತ್ರಗೊಳಿಸುವ ನಿಟ್ಟಿನಲ್ಲಿ ಸಿಂಗಾಪುರದಲ್ಲಿ ಪ್ಲಾನ್ ನಡಿಯುತ್ತಿದೆ ಎಂಬ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಹೇಳಿಕೆಯನ್ನು ತಳ್ಳಿ ಹಾಲಿರುವ ಸಿದ್ದರಾಮಯ್ಯ, ಈ ಪ್ರಶ್ನೆಯನ್ನು ಅವರಿಗೇ ಕೇಳಿ ಎಂದು ಹೊರಟರು.