ಶಾಲೆಯಲ್ಲೇ ಹೃದಯಾಘಾತದಿಂದ ಶಿಕ್ಷಕ ಸಾವು

0
67

ಬಾಗಲಕೋಟೆ(ಜಮಖಂಡಿ): ಸ್ಥಳೀಯ ತುಂಗಳ ಶಾಲೆಯಲ್ಲಿ ಕನ್ನಡ ವಿಷಯ ಭೋದನಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗುರುಪಾದ ಕಾಶಿರಾಯ ಹಿಪ್ಪರಗಿ (46) ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ನಿವಾಸಿ ಶಿಕ್ಷಕ ಗುರುಪಾದ ಹಿಪ್ಪರಗಿ ಶಾಲಾ ಪ್ರಾರ್ಥನೆ ಮುಗಿಸಿ ತರಗತಿಗೆ ತೆರಳುವಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡು ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ.

Previous articleಬಾಲಕನ ಜ್ಞಾನಕ್ಕೆ ಬೆರಗಾದ ನೆಟ್ಟಿಗರು
Next articleಹಿಂಜಾವೇ ಮುಖಂಡ ದರೆಗುಡ್ಡೆಗೆ 15 ದಿನ ನ್ಯಾಯಾಂಗ ಬಂಧನ