ಚಿಕ್ಕಮಗಳೂರು: ಬಾಬಾ ಬುಡನ್ಸ್ವಾಮಿದರ್ಗಾದ ಶಾಖಾದ್ರಿ ಗೌಸ್ ಮೊಹಿದ್ದೀನ್ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಜಿಂಕೆ, ಚಿರತೆ ಚರ್ಮ ಶುಕ್ರವಾರ ರಾತ್ರಿ ಪತ್ತೆಯಾಯಿತು.
ಸರ್ಚ್ ವಾರಂಟ್ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಚಿಕ್ಕಮಗಳೂರಿನ ಮಹಾತ್ಮ ಗಾಂಧಿ ರಸ್ತೆ ಬಳಿಯಿರುವ ಶಾಖಾದ್ರಿ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ್ದರು. ಆದರೆ, ಈ ವೇಳೆ ಶಾಖಾದ್ರಿ ಅವರು ಮನೆಯಲ್ಲಿರಲಿಲ್ಲ.
ರಾಯಚೂರಿಗೆ ತೆರಳಿದ್ದ ಶಾಖಾದ್ರಿ ಬರುವಿಕೆಗಾಗಿ ಕಾಯುತ್ತಿದ್ದ ಸಿಬ್ಬಂದಿ, ಸಂಜೆಯಾದರೂ ಶಾಖಾದ್ರಿ ಗೌಸ್ ಮೊಹಿದ್ದೀನ್ ಹಿಂದಿರುಗದ ಹಿನ್ನೆಲೆ ಶೋಧ ನಡೆಸಿದ್ದಾರೆ.
ಶಾಖಾದ್ರಿ ಅಣ್ಣನ ಮಗನ ಬಳಿಯಿದ್ದ ಬೀಗದ ಕೈ ಬಳಸಿ ನಿವಾಸದ ಬಾಗಿಲು ತೆರೆಯಲಾಯಿತು. ಆರ್ಎಫ್ಒ ಮೋಹನ್ ನೇತೃತ್ವದಲ್ಲಿ ಶಾಖಾದ್ರಿ ನಿವಾಸದಲ್ಲಿ ಶೋಧ ನಡೆಸಲಾಯಿತು. ಇದೇ ವೇಳೆ ಜಿಂಕೆ, ಚಿರತೆ ಚರ್ಮ ಪತ್ತೆಯಾಯಿತು.