ನವಲಗುಂದ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆ ರವಿವಾರ ಜಾರಿ ಹಿನ್ನೆಲೆಯಲ್ಲಿ ಇಲ್ಲಿನ ಬಸ್ ನಿಲ್ದಾಣವನ್ನು ಶನಿವಾರ ಸಂಜೆ ಸ್ವಚ್ಛಗೊಳಿಸಲಾಯಿತು. ಸಂಜೆ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸಿತು.
ಸದಾ ಅಸ್ವಚ್ಛತೆಯಿಂದ ಕೂಡಿರುತ್ತಿದ್ದ ಬಸ್ ನಿಲ್ದಾಣ ಶನಿವಾರ ಸಂಜೆ ಹೊತ್ತಿಗೆ ಸ್ವಚ್ಛಗೊಂಡಿತ್ತು. ಸಿಬ್ಬಂದಿ, ಅಧಿಕಾರಿಗಳು ಮುತುವರ್ಜಿವಹಿಸಿ ಕಾರ್ಯಪ್ರವೃತ್ತರಾಗಿದ್ದು ಕಂಡು ಬಂದಿತು. ಶಕ್ತಿ ಯೋಜನೆ ಜಾರಿ ದಿಶೆಯಿಂದ ನಮ್ಮೂರ ಬಸ್ ನಿಲ್ದಾಣ ಸ್ವಚ್ಛವಾಯಿತು ಎಂದು ಸಾರ್ವಜನಿಕರು ಮಾತನಾಡಿಕೊಂಡರು.
ವಿದ್ಯುತ್ ದೀಪಾಂಕರದಲ್ಲಿ ಕಂಗೊಳಿಸಿದ ಬಸ್ ನಿಲ್ದಾಣ ಕಂಡು ಹರ್ಷ ಪಟ್ಟರು.