ವೀರಶೈವ ಲಿಂಗಾಯತ ಮುಖಂಡರ ಕಡೆಗಣನೆ: ಈಶ್ವರ್ ಖಂಡ್ರೆ ವಾಗ್ದಾಳಿ

0
29
ಈಶ್ವರ್ ಖಂಡ್ರೆ

ಬೀದರ್: ಬಿಜೆಪಿಯಲ್ಲಿರುವ ವೀರಶೈವ ಲಿಂಗಾಯತ ಮುಖಂಡರನ್ನು ಆ ಪಕ್ಷ `ನಿಷ್ಕೃಷ್ಟ’ವಾಗಿ ನಡೆಸಿಕೊಳ್ಳುತ್ತಲಿದ್ದು ಈ ಬಗ್ಗೆ ಪಕ್ಷದಲ್ಲಿರುವ ಸಮುದಾಯದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಭಾಲ್ಕಿ ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಮತ್ತು ಕಾಂಗ್ರೆಸ್ ಮುಖಂಡನಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ಪೇಸಿಎಂ ಅಭಿಯಾನಕ್ಕೆ ಬಿಜೆಪಿ ಜಾತಿಯ ಬಣ್ಣ ಬಳಿದು ವೀರಶೈವ ಲಿಂಗಾಯತರಿಗೆ, ಇವರ ಮುಖಂಡರಿಗೆ ಕಾಂಗ್ರೆಸ್ ಅವಮಾನ ಮಾಡಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಜನರ ಮನದಲ್ಲಿ ಬಿಂಬಿಸಲು ಪ್ರಯತ್ನಿಸುತ್ತಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

Previous articleಮತಾಂತರದ ಹಿಂದೆ ಮದರಸಾ ಕೈವಾಡ: ಪ್ರಮೋದ ಮುತಾಲಿಕ
Next articleವಿದ್ಯುತ್ ಸ್ಪರ್ಶಿಸಿ 2 ಗಂಡು ಕಾಡಾನೆ ಸಾವು