ವಿಮ್ಸ್ ಸಾವಿನ ವಿಷಯದಲ್ಲಿ ನಿರ್ಲಕ್ಷ್ಯ ಇಲ್ಲ: ಸಚಿವ ಡಾ. ಸುಧಾಕರ್ ಸ್ಪಷ್ಟನೆ

ಡಾ. ಸುಧಾಕರ್

ಬಳ್ಳಾರಿ: ವಿಮ್ಸ್‌ನಲ್ಲಿ ಸೆ. 14ರಂದು ಇಬ್ಬರು ಒಳರೋಗಿಗಳು ಸಾವಿಗೀಡಾದ ಘಟನೆಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ ಅಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಪರೋಕ್ಷವಾಗಿ ಸ್ಪಷ್ಟಪಡಿಸಿದರು.
ವಿಮ್ಸ್‌ನಲ್ಲಿ ಘಟನೆ ಕುರಿತು ಭಾನುವಾರ ಸುದೀರ್ಘವಾಗಿ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 14ರಂದು ವಿಮ್ಸ್‌ನಲ್ಲಿ ಸಂಭವಿಸಿದ ಇಬ್ಬರು ಸಾವಿನ ಘಟನೆಗೆ ವಿದ್ಯುತ್ ಅವಘಡ ಅಥವಾ ವೆಂಟಿಲೇಟರ್ ಸಮಸ್ಯೆ ಕಾರಣ ಅಲ್ಲ. ಅಸುನೀಗಿದ ಇಬ್ಬರೂ ಸಹ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಂತಿಮವಾಗಿ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ ಎಂದು ಜಿಲ್ಲಾಡಳಿತ, ಆರೋಗ್ಯ ಇಲಾಖೆ ನೀಡಿರುವ ವರದಿಗಳಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.