Home Advertisement
Home ತಾಜಾ ಸುದ್ದಿ ವಿಘ್ನ ನಿವಾರಕ ವಿನಾಯಕನಿಗೆ ವಿದಾಯ

ವಿಘ್ನ ನಿವಾರಕ ವಿನಾಯಕನಿಗೆ ವಿದಾಯ

0
170
ಗಣೇಶ ವಿಸರ್ಜನೆ

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಶನಿವಾರ ವಿಘ್ನ ನಿವಾರಕ ಶ್ರೀವಿನಾಯಕನ ವಿಸರ್ಜನಾ ಶೋಭಾ ಯಾತ್ರೆಯ ಮೆರವಣಿಗೆಗೆ ಜನಸಾಗರವೇ ಹರಿದು ಬಂದಿದೆ. ಎಲ್ಲಿ ನೋಡಿದರೂ ಜನಜಂಗುಳಿ. ಕಳೆದ ವರ್ಷಕ್ಕಿಂತ ಈ ಬಾರಿ ಸಾಗರೋಪಾದಿಯಲ್ಲಿ ಜನರು ಬಂದಿದ್ದು, ವಿನಾಯಕನಿಗೆ ವಿದಾಯ ಹೇಳಲು ಸಾಕ್ಷಿಯಾಗಿದ್ದಾರೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪನೆ ಮಾಡಿದ್ದ ಗಣೇಶನ ವಿಸರ್ಜನಾ ಶೋಭಾ ಯಾತ್ರೆಗೆ ಗಣ್ಯರು ಚಾಲನೆ ನೀಡಿದರು. ಬೆಳಗ್ಗೆ 10.30ಕ್ಕೆ ಆರಂಭವಾದ ಮೆರವಣಿಗೆ ಮಧ್ಯಾಹ್ನ 2 ಗಂಟೆಯಾದರೂ ಮುಂದೆ ಸಾಗಿರಲಿಲ್ಲ.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ಹಾವೇರಿ ಜಿಲ್ಲೆಗಳು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಯುವಕರು ಜಮಾಯಿಸಿದ್ದಾರೆ. ವಿನಾಯಕನ ಮೆರವಣಿಗೆಯಲ್ಲಿ ಐದಾರು ಡಿಜೆಗಳು ಇದ್ದು, ಮೆರವಣಿಗೆಯುದ್ದಕ್ಕೂ ಡಿಜೆಯಿಂದ ಹೊರ ಹೊಮ್ಮುವ ಶಬ್ದಕ್ಕೆ ತಕ್ಕಂತೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸುತ್ತಿರುವುದು ಎದ್ದು ಕಾಣುತ್ತಿತ್ತು.

ದಾವಣಗೆರೆ