ವಾಣಿಜ್ಯನಗರಿಯಲ್ಲೂ ಜನರಿಗೆ ತಟ್ಟಿದ ಮುಷ್ಕರದ ಬಿಸಿ

0
14


ಹುಬ್ಬಳ್ಳಿ: ಸರ್ಕಾರಿ‌ ನೌಕರರ ಮುಷ್ಕರ ಹಿನ್ನಲೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಯೂ ಮುಷ್ಕಕ್ಕೆ ಬೆಂಬಲ ವ್ಯಕ್ತಪಡಿಸಿ ಸೇವೆಯಿಂದ ದೂರ ಉಳಿದಿದ್ದಾರೆ. ಆದರೆ ಗುತ್ತಿಗೆ ಆಧಾರದ ನೌಕರರಿಂದ ಓಪಿಡಿ ಸೇವೆ ನೀಡಲಾಗುತ್ತಿದೆ.
ಓಪಿಡಿ ಸೇವೆಯಿಂದ 400 ಕ್ಕೂ ಹೆಚ್ಚು ಕಿಮ್ಸ್ ಸರ್ಕಾರಿ ನೌಕರರು ಹೊರಗುಳಿದಿದ್ದಾರೆ. ಹೀಗಾಗಿ ಗುತ್ತಿಗೆ ಆಧಾರದ ಸಿಬ್ಬಂದಿಗಳಿಂದ ಓಪಿಡಿ ಸೇವೆ ನೀಡಲಾಗುತ್ತಿದೆ. ಕಿಮ್ಸ್ ಆಡಳಿತ ಮಂಡಳಿಹೊರ ರೋಗಿಗಳ ವಿಭಾಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಿರುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಿಲ್ಲ.‌
ಐಸಿಯು ಮತ್ತು ತುರ್ತು ಚಿಕಿತ್ಸಾ ಘಟಕ ಸೇವೆ ಮುಂದುವರೆಸಲಾಗಿದೆ.
ಕಪ್ಪು ಪಟ್ಟಿ ಕಟ್ಟಿಕೊಂಡು ತುರ್ತು ಸೇವೆ ನೀಡುತ್ತಿರುವ ಕಿಮ್ಸ್ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು.

ಕಡಿಮೆ ಸಿಬ್ಬಂದಿ ಸಾರ್ವಜನಿಕರ ಪರದಾಟ:
ಕಿಮ್ಸ್ ನೌಕರರು ಪ್ರತಿಭಟನೆ ಮುಂದುವರೆಸಿದ್ದರಿಂದ ನಿತ್ಯದ ಒಪಿಡಿ‌ ಸೇವೆಗೆ ಹೆಚ್ಚಿನ ಜನ ಸಾಲುಗಟ್ಟಿ ನಿಲ್ಲುವಂತಾಯಿತು.
ಕೆಲವೇ ಸಿಬ್ಬಂದಿಯಿಂದ ಕಾರ್ಯ ನಿರ್ವಹಣೆ ಮಾಡಿದ್ದರಿಂದ ರೋಗಿಗಳ ಪರದಾಡಿದರು. ಪ್ರತಿ ದಿನ ತಕ್ಷಣಕ್ಕೆ ಚಿಕಿತ್ಸೆ ಸಿಗ್ತಿತ್ತು
ಆದರೆ ಇಂದು ಚಿಕಿತ್ಸೆ ವಿಳಂಬವಾಗಿದೆ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರಿ ಕಚೇರಿಗಳು ಭಣ ಭಣ:
ತಹಶೀಲ್ದಾರ ಕಚೇರಿ, ಮಹಾನಗರ ಪಾಲಿಕೆ, ನೋಂದಣಿ ಕಚೇರಿ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೆ ಭಣ ಭಣ ಎನ್ನುತ್ತಿವೆ.

Previous articleಸರ್ಕಾರಿ ನೌಕರರ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವ ವಿಶ್ವಾಸ : ಬೊಮ್ಮಾಯಿ
Next articleಆರ್ಥಿಕ ಅಧಿಕಾರಿಗಳೊಂದಿಗೆ ಸಭೆ ಬಳಿಕ ಮುಂದಿನ ನಿರ್ಧಾರ: ಷಡಕ್ಷರಿ