Home Advertisement
Home ತಾಜಾ ಸುದ್ದಿ `ವಯಸ್ಸಾದವರಿಗೆ ಟಿಕೆಟ್ ತಪ್ಪಬಹುದು’

`ವಯಸ್ಸಾದವರಿಗೆ ಟಿಕೆಟ್ ತಪ್ಪಬಹುದು’

0
103
aravind bellad

ಧಾರವಾಡ: ಪ್ರತಿ ಬಾರಿಯ ಚುನಾವಣೆಯಲ್ಲಿ ನಾಲ್ಕೆದು ಜನ ವಯಸ್ಸಾದ ಶಾಸಕರು ಟಿಕೆಟ್ ಬೇಡ ಎನ್ನುತ್ತಾರೆ. ಇನ್ನೂ ಕೆಲವರು ಸುಮ್ಮನಾಗುತ್ತಾರೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆ ಸಮರ್ಥಿಸಿಕೊಂಡ ಅವರು, ಹಳೆಯ ಹಾಗೂ ವಯಸ್ಸಾದ ಶಾಸಕರು ಕೂಡ ಇದ್ದಾರೆ. ವಯಸ್ಸಾದ ಕಾರಣ ಅವರು ಟಿಕೆಟ್ ಬೇಡ ಎನ್ನಬಹುದು. ಅಥವಾ ಪಕ್ಷ ಅವರಿಗೆ ಟಿಕೆಟ್ ನೀಡದೇ ಇರಬಹುದು. ಅದನ್ನೇ ಯಡಿಯೂರಪ್ಪನವರು ಹೇಳಿರಬಹುದು. ಅದರಲ್ಲಿ ತಪ್ಪೇನಿದೆ ಎಂದರು.
ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದ ಅವರು, ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್‌ನವರದ್ದು ಏನೂ ನಡೆಯುವುದಿಲ್ಲ ಎಂದು ತಿಳಿದಿದೆ. ಈಗ ಅವರಲ್ಲ ಹತಾಷರಾಗಿದ್ದಾರೆ. ಅದಕ್ಕಾಗಿ ಕೊನೆಯ ಪ್ರಯತ್ನ. ಕೈಕಾಲು ಹೊಡೆಯುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.

Previous article5, 8ನೇ ತರಗತಿಯ ಬೋರ್ಡ್‌ ಪರೀಕ್ಷೆ ರದ್ದು: ಹೈಕೋರ್ಟ್‌ ಆದೇಶ
Next articleಬಹುಮಹಡಿ ಕಟ್ಟಡದಿಂದ ಬಿದ್ದು ‘ಓಯೋ’ ಸಂಸ್ಥಾಪಕ ರಿತೇಶ್‌ ಅಗರ್ವಾಲ್‌ ತಂದೆ ಸಾವು!