ಧಾರವಾಡ: ಇಂದು ಬೆಳ್ಳಂ ಬೆಳಗ್ಗೆ ಇಲ್ಲಿಯ ಮೂರು ಠಾಣೆಗಳ ಪೊಲೀಸರು ತಮ್ಮ ವ್ಯಾಪ್ತಿಯ ರೌಡಿ ಶೀಟರ್ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಕೆಲ ದಿನಗಳಿಂದ ಹು-ಧಾ ಅವಳಿ ನಗರದಲ್ಲಿ ಅಕ್ರಮ ಹಾಗೂ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಧಾರವಾಡದ ಉಪನಗರ, ವಿದ್ಯಾಗಿರಿ ಮತ್ತು ಶಹರ ಠಾಣಾ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿಯ ರೌಡಿ ಶೀಟರ್ ಮನೆಗಳಿಗೆ ಭೇಟಿ ನೀಡಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಮೂರು ಠಾಣಾ ವ್ಯಾಪ್ತಿಯ ಸುಮಾರು ೪೫ಕ್ಕೂ ಹೆಚ್ಚು ರೌಡಿ ಶೀಟರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೇ ಯಾವುದೇ ಅಕ್ರಮ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.