ರೌಡಿಶೀಟರ್‌ ಬಾಲರಾಜ ಗಡಿಪಾರು

0
20

ಹುಬ್ಬಳ್ಳಿ: ಜೀವ ಬೆದರಿಕೆ, ಮಾನಭಂಗ, ಹಲ್ಲೆ, ಅಪಹರಣ, ಕೊಲೆ ಬೆದರಿಕೆಗಳಂತಹ ಎಂಟು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತನನ್ನು ೬ ತಿಂಗಳು ಕಾಲ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ನವನಗರದ(ಹಾಲಿ ಧಾರವಾಡದ) ಬಾಲರಾಜ ಉರ್ಫ ಬಾಲ್ಯಾ ರಾಮಣ್ಣ ದೊಡ್ಡಮನಿ(೩೮) ಎಂಬಾತನನ್ನು ಗಡಿಪಾರು ಮಾಡಲಾಗಿದೆ. ೬ ತಿಂಗಳ ಅವಧಿಗೆ ಬೀದರ ಜಿಲ್ಲೆಯ ಬೀದರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ವಿಶೇಷ ಕಾರ್ಯನಿರ್ವಾಹಕ ನ್ಯಾಯಾಲಯದ ಆದೇಶದ ಮೇರೆಗೆ ಗಡಿಪಾರು ಮಾಡಲಾಗಿದೆ.

Previous articleಸಾಮಾಜಿಕ ನ್ಯಾಯ ಒದಗಿಸಿದ ಚರಿತ್ರೆ ನಮ್ಮ ನಾಡಿಗಿದೆ
Next articleಚಂದ್ರಯಾನ ಯಶಸ್ವಿ, ರಾಜ್ಯಕ್ಕೆ ಮಹಿಳಾ ಸಿಎಂ: ಭವಿಷ್ಯ ನುಡಿದ ಕೋಡಿಶ್ರೀ