ರಾಹುಲ್ ಗಾಂಧಿ ಬಂದ ಪುಟ್ಟ, ಹೋದ ಪುಟ್ಟ

0
20
shobha karandlaje

ಹುಬ್ಬಳ್ಳಿ: ಕನ್ನಡ ನಾಡಿನ ಭಾಷೆ, ಇಲ್ಲಿನ ಜನರನ್ನು, ಈ ನೆಲದ ಮಹತ್ವವನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅರ್ಥ ಮಾಡಿಕೊಂಡಿಲ್ಲ. ಕರ್ನಾಟಕಕ್ಕೆ ಅವರು ಭೇಟಿ ನೀಡುತ್ತಿರುವುದು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಎಲ್ಲಿಯೇ ಚುನಾವಣೆ ನಡೆದರೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೋಗುತ್ತಾರೆ. ಅವರು ಹೋದಲೆಲ್ಲ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ನಮಗೆ ತಿಳಿದಿದೆ ಎಂದರು.
ಗುಜರಾತ್ ರಾಜ್ಯದ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡಿದ್ದರು. ಆದರೆ, ಅವರ ಭಾರತ ಜೋಡೋ ದೇಶದಲ್ಲಿ ಯಾವುದೇ ರೀತಿಯಾಗಿ ಮತವಾಗಿ ಪರಿವರ್ತನೆಯಾಗುವುದಕ್ಕೆ ಯಶಸ್ವಿಯಾಗಿಲ್ಲ. ಅದಕ್ಕೆ ಪುರಾವೆ ಎಂಬಂತೆ ಗುಜರಾತ್ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಸರ್ಕಾರ ರಚನೆ ಮಾಡಿದ್ದೇವೆ. ರಾಜ್ಯಕ್ಕೆ ರಾಹುಲ್ ಗಾಂಧಿ ಬಂದು ಹೋಗುವುದು ಒಂದು ರೀತಿ ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ಎಂದು ವ್ಯಂಗ್ಯವಾಡಿದರು.

Previous articleಇಬ್ಬರು ಕಳ್ಳರ ಬಂಧನ: 23 ದ್ವಿಚಕ್ರ ವಾಹನ ವಶಕ್ಕೆ
Next articleಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಗೋಯಲ್‌ ಮೆಚ್ಚುಗೆ