ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಸಾಧ್ಯತೆ

0
13

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರುದ್ರಪ್ಪ ಲಮಾಣಿ ಉಪ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ನಮಗೆ ಮುಜುಗರ ಇದೆ. ಚುನಾವಣೆಯ ಫಲಿತಾಂಶ ಬಂದ ಮೇಲೆ ಹಾವೇರಿ ಜಿಲ್ಲೆಯವರು ಇಬ್ಬರು ಮೂವರು ಹಿರಿಯ ಶಾಸಕರಿದ್ದೀರಿ, ನೀವು ಸಚಿವರಾಗಿ ಬರುತ್ತಿರಿ ಎಂದು ಭಾವಿಸಿದ್ದೇವು. ಅದು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹುದ್ದೆಯಲ್ಲಿ ಅಧಿಕಾರ ಕಡಿಮೆ ಗೌರವ ಜಾಸ್ತಿ, ನೀವು ಸರಳ ಸಜ್ಜನರಿದ್ದೀರಿ, ನಾನು ನಿಮ್ಮ ತಾಂಡಾಕ್ಕೆ, ಮನೆಗೆ ಬಂದಿದ್ದೇನೆ. ರಾಜಕಾರಣದಲ್ಲಿ ಯಾರು ಏನು ಬೇಕಾದರೂ ಆಗಬಹುದು. ರಾಜಕಾರಣದಲ್ಲಿ ಪವರ್ ಪೊಲಿಟಿಕ್ಸ್ ಇಸ್ ವೇಟಿಂಗ್ ಗೇಮ್ ಅಂತ ಈಗ ಅದು ಅವಕಾಶ ಬಂದಾಗ ಅದನ್ನು ಪಡೆದುಕೊಳ್ಳಬೇಕು. ಶಕ್ತಿ ಇದ್ದವರು ಅಧಿಕಾರ ಪಡೆದುಕೊಳ್ಳುವ ಕೆಲಸ ಮಾಡುತ್ತಾರೆ ಎಂದರು.
ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ ವೀರನೂ ಅಲ್ಲ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೊಟ್ಟ ಎಲ್ಲ ಕುದುರೆಗಳನ್ನು ಏರಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ಕುದುರೆ ಏರೂತ್ತಾರೊ ನೋಡೊಣ. ಬದಲಾವಣೆ ಜಗದ ನಿಯಮ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಸಾಧ್ಯತೆ ಇದೆ ಎಂದು ಮಾರ್ಮಿಕವಾಗಿ ನುಡಿದರು.

Previous articleಶಾಶ್ವತ ಟಾಸ್ಕ್‌ಫೋರ್ಸ್ ರಚನೆ ಮಾಡಿ
Next articleಗೋಹತ್ಯೆ ಪ್ರಕರಣ: ಶಾಸಕ ಸಲಗರ್ ಸೇರಿ ೯ ಜನರ ವಿರುದ್ಧ ಕೇಸ್