ರಾಜೀಸಂದಾನ ಮೂಲಕ ಮತ್ತೆ “ಒಂದಾಗೋಣ ಬಾ”

0
12

ರಾಯಚೂರು: ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲು ಹತ್ತಿದ್ದ 15 ಜೋಡಿಗಳು ಮರಳಿ ಸಂಸಾರ ಜೀವನದತ್ತ ಹೆಜ್ಜೆ ಹಾಕಿದ ಘಟನೆ ನಡೆದಿದೆ, ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಕದ ಕುಟುಂಬ ನ್ಯಾಯಾಲಯದಲ್ಲಿ ಜರುಗಿದ ಲೋಕ ಅದಾಲತ್‌ನ ವಿಶೇಷ ಕಾರ್ಯಕ್ರಮದಲ್ಲಿ ವಿಚ್ಚೇದನ ಕೋರಿ ನ್ಯಾಯಾಲಯಕ್ಕೆ ಬಂದಿದ್ದ 15 ಜೋಡಿಗಳನ್ನು ರಾಜೀಸಂದಾನ ಮೂಲಕ ಒಂದು ಗೂಡಿಸಿ ನ್ಯಾಯಾಲಯದಲ್ಲಿಯೇ ಹಾರ ಬದಲಾಯಿಸಿಕೊಂಡು ಮರಳಿ ಸಂಸಾರದತ್ತ ಹೆಜ್ಜೆ ಹಾಕಿದ ಪ್ರಸಂಗ ನಡೆಯಿತು.
ಹಲವು ವರ್ಷದಿಂದ ಬೇರ್ಪಟ್ಟು ವಿಚ್ಚೇದನಕ್ಕಾಗಿ ನ್ಯಾಯಾಲಯ ಮೊರೆ ಹೊಕ್ಕ ಹಲವು ಜೋಡಿಗಳಿಗೆ ತಿಳಿ ಹೇಳಿ ಮತ್ತೆ ಕೂಡಿಸುವ ಕೆಲಸದಲ್ಲಿ ರಾಯಚೂರು ಜಿಲ್ಲಾ ಕುಟುಂಬ ನ್ಯಾಯಾಲಯ ಯಶಸ್ವಿ ಆಯಿತು.
ಈ ಸಂದರ್ಭದಲ್ಲಿ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ಮಾರುತಿ ಬಗಾಡೆ, ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ವರ, ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಧಯಾನಂದ ಸೇರಿ ನ್ಯಾಯವಾದಿಗಳು, ದಂಪತಿಗಳು, ಕುಟುಂಬಸ್ಥರು ಹಾಗೂ ನ್ಯಾಯಾಲಯದ ಸಿಬ್ಬಂದಿ ಭಾಗವಹಿಸಿದ್ದರು.

Previous articleವಿದ್ಯುತ್ ಸ್ಪರ್ಷಿಸಿ ರೈತ ಸಾವು
Next articleಕಾಮಿನಿ ನದಿ ಹಾಗೂ ಸಮುದ್ರ ಮಾರ್ಗ ಮಧ್ಯೆ ತಡೆಗೋಡೆ