ರಾಜಕಾರಣಿಗಳು ಮಾದರಿಯಾಗಿರಬೇಕು: ಹೊರಟ್ಟಿ

0
17
ಹೊರಟ್ಟಿ

ರಾಜಕಾರಣದಲ್ಲಿ ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಹೇಳಿಕೆ ನೀಡುವುದು ಸಹಜ. ಆದರೆ, ಜನಪ್ರತಿನಿಧಿಗಳಾದವರು ಕಚ್ಚಾಡುವುದು ಸರಿಯಲ್ಲ. ರಾಜಕಾರಣಿಗಳು ಮಾದರಿಯಾಗಿರಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ತಿಪ್ಪಾರೆಡ್ಡಿ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಗುತ್ತಿಗೆದಾರ ಮಂಜುನಾಥ್ ಆರೋಪ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣಿಗಳಲ್ಲಿ ಶಿಸ್ತು ಇರಬೇಕು. ಶಿಸ್ತು ಇಲ್ಲ ಎಂದರೆ ಹೀಗಾಗುತ್ತದೆ. ಸಿ.ಡಿ. ರಾಜಕಾರಣ ಹಿಂದೆಯೂ ಇತ್ತು. ಆದರೆ, ಈಗ ಅದು ಹೆಚ್ಚಾಗಿದೆ ಎನಿಸುತ್ತಿದೆ. ಇದು ಯಾರಿಗೂ ಶೋಭೆಯಲ್ಲ ಎಂದು ಎಚ್ಚರಿಸಿದರು.

Previous articleಶಿವಸೇನೆ ಸಂಸದರಿಗೆ ಗಡಿ ಪ್ರವೇಶಕ್ಕೆ ನಿರ್ಬಂಧ
Next articleಪ್ರಜಾಧ್ವನಿಯಲ್ಲಿ ಕಾಂಗ್ರೆಸ್ ವಾಗ್ದಾಳಿ