ಚಂದ್ರನ ಮೇಲೆ ಸಂಶೋಧನೆಗಾಗಿ ರಷ್ಯಾ ಕೈಗೊಂಡಿದ್ದ ಚಂದ್ರಯಾನ ನೌಕೆ ತಾಂತ್ರಿಕ ದೋಷದಿಂದ ಪತನವಾಗಿದೆ.
ಚಂದ್ರನ ಮೇಲೆ ಇಳಿಯುವಾಗ ತಾಂತ್ರಿಕ ದೋಷದಿಂದ ಒಂದು ದಿನದ ಮೊದಲೇ ರಷ್ಯಾದ ‘ಲೂನಾ –25’ ಬಾಹ್ಯಾಕಾಶ ನೌಕೆ ಪತನಗೊಂಡಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಆಗಸ್ಟ್ 11ರಂದು ರಷ್ಯಾ ಉಡಾವಣೆ ಮಾಡಿತ್ತು. ನೌಕೆಯು ಆಗಸ್ಟ್ 21 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಮಯ ನಿಗದಿ ಮಾಡಲಾಗಿತ್ತು. ಆದರೆ ಒಂದು ದಿನದ ಮೊದಲೇ ಪತನಗೊಂಡಿದೆ. ಈ ಮೂಲಕ ಭಾರತದ ಚಂದ್ರಯಾನ-3ರ ಮೊದಲು ಚಂದ್ರನ ಮೇಲೆ ಲೂನಾ-25 ಲ್ಯಾಂಡ ಆಗಬೇಕಿದ್ದ ಕನಸು ಭಗ್ನಗೊಂಡಿದೆ.