ಯಶವಂತಪುರ-ವಾಸ್ಕೋ-ಡ-ಗಾಮಾ ನಡುವೆ ವಿಶೇಷ ರೈಲು

0
15

ಹುಬ್ಬಳ್ಳಿ: ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸುವ ಸಲುವಾಗಿ ಯಶವಂತಪುರ ಮತ್ತು ವಾಸ್ಕೋ-ಡ-ಗಾಮಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲನ್ನು(೦೭೩೫೭/೦೭೩೫೮) ಓಡಿಸಲು ನಿರ್ಧರಿಸಲಾಗಿದೆ.
ರೈಲು ಸಂಖ್ಯೆ ೦೭೩೫೭ ಆಗಸ್ಟ್ ೧೧ ರಂದು ಯಶವಂತಪುರ ನಿಲ್ದಾಣದಿಂದ ಸಂಜೆ ೦೬.೧೫ ಗಂಟೆಗೆ ಹೊರಟು ಮರುದಿನ, ವಾಸ್ಕೋ-ಡ-ಗಾಮಾ ನಿಲ್ದಾಣವನ್ನು ಬೆಳಿಗ್ಗೆ ೦೯.೩೦ ಗಂಟೆಗೆ ತಲುಪಲಿದೆ.
ಇದೆ ರೈಲು ಪುನಃ (೦೭೩೫೮) ಆಗಸ್ಟ್ ೧೨ ರಂದು ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ಮಧ್ಯಾಹ್ನ ೦೨.೩೦ ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ ೦೪.೩೦ ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲುಗಳು ಎಸಿ ಪಸ್ಟ್ ಕ್ಲಾಸ್ (೧), ಎಸಿ ಟು ಟೈಯರ್ (೨), ಎಸಿ ತ್ರಿ ಟೈಯರ್ (೭), ಸ್ಲೀಪರ್ ಕ್ಲಾಸ್ (೮) ಮತ್ತು ದಿವ್ಯಾಂಗ್ ಸ್ನೇಹಿ ಬೋಗಿಗಳಿಂದ ಕೂಡಿದ ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು (೨) ಸೇರಿದಂತೆ ಒಟ್ಟು ೨೦ ಬೋಗಿಗಳು ಹೊಂದಿರಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

Previous articleಬಿಜೆಪಿಯಿಂದ ಪೇಸಿಎಸ್‌ ಅಭಿಯಾನ
Next articleಅವಿಶ್ವಾಸ ಗೊತ್ತುವಳಿ ನಮಗೆ ಮಂಗಳಕರ