ಯಡಿಯೂರಪ್ಪ ವಿರುದ್ಧ ಮಾತಾಡಿದರೆ ಪಕ್ಷ ವಿರೋಧಿ ಅಲ್ಲವೇ?

0
17

ದಾವಣಗೆರೆ: ಬಿಎಸ್​ವೈ ವಿರುದ್ಧ ಮಾತನಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೀರಾ? ಎಂದು ಮಾಜಿ ಸಚಿವ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಹಾಗೂ ನಾಯಕರ ವಿರುದ್ಧ ಮಾತಾಡಿದವರ ವಿರುದ್ಧ ಕ್ರಮ ಎಂದಿದ್ದೀರಿ. ಅದ್ರೆ, ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ನಮ್ಮವರೇ ವಾಗ್ದಾಳಿ ನಡೆಸಿದ್ದರು. ಬಿಎಸ್​ವೈ ವಿರುದ್ಧ ಮಾತನಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ರೇಣುಕಾಚಾರ್ಯ, ಮಾಜಿ ಸಿಎಂ ಯಡಿಯೂರಪ್ಪ ಪರ ಮಾತನಾಡಿದ್ರೆ ಪಕ್ಷ ವಿರೋಧಿ. ಯಡಿಯೂರಪ್ಪ ವಿರುದ್ಧ ಮಾತಾಡಿದರೆ ಪಕ್ಷ ವಿರೋಧಿ ಅಲ್ಲವಾ? ಪಕ್ಷ ಕಟ್ಟಿದವರು ಯಡಿಯೂರಪ್ಪ, ಅನಂತ್ ಕುಮಾರ್, ಈಶ್ವರಪ್ಪ, ಜಗದೀಶ ಶೆಟ್ಟರ್‌. ಆದ್ರೆ, ಈಗ ಅನಂತಕುಮಾರ ನಮ್ಮೊಂದಿಗಿಲ್ಲ. ಉಳಿದ ಮೂರು ಜನರನ್ನ ಮುಗಿಸಿ ಹಾಕಿದ್ದೀರಿ. ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನ ಸಿಎಂ ಮಾಡಿದ್ರಿ. ಆದ್ರೆ ಅವರ ಕೈ ಕಟ್ಟಿ ಹಾಕಿದ್ರಿ. ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಲಿಲ್ಲ ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಆತ್ಮಾವಲೋಕನ ಅಗತ್ಯವಿದೆ. ಚುನಾವಣೆ ಪೂರ್ವದಲ್ಲಿ ಹತ್ತಾರು ಸಲ ಹೇಳಿದೆ. ಆದ್ರೆ ಕ್ರಮ‌ಕೈಗೊಳ್ಳಲಿಲ್ಲ. ಈ ಎಲ್ಲ ಕಾರಣಕ್ಕೆ ಬಿಜೆಪಿ ಹೀನಾಯ ಸೋಲು ಕಂಡಿದೆ ಎಂದು ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.

Previous articleರಾಷ್ಟ್ರೀಯ ಪಕ್ಷಗಳು ಈಸ್ಟ್ ಇಂಡಿಯಾ ಕಂಪನಿಯಂತಾಗಿವೆ
Next articleಕಾಂಗ್ರೆಸ್ ಗ್ಯಾರಂಟಿ ಹಿಂದೆ ಭ್ರಷ್ಟಾಚಾರ ಅಡಗಿದೆ