ಧಾರವಾಡ: ಕೇಂದ್ರ ಸರ್ಕಾರ ಅಂಗನವಾಡಿ ಶಿಕ್ಷಕಿಯರಿಗೆ ನೀಡಿದ್ದ ಮೊಬೈಲ್ ಫೋನ್‌ಗಳು ಕಳಪೆಮಟ್ಟದ್ದಾಗಿವೆ ಎಂದು ಆರೋಪಿಸಿ ಶಿಕ್ಷಕಿಯರು ವಾಪಸ್ ನೀಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದರು.
ಕೇಂದ್ರ ಸರ್ಕಾರ ಅಂಗನವಾಡಿ ಶಿಕ್ಷಕಿಯರಿಗೆ ಕಳಪೆ ಗುಣಮಟ್ಟದ ಮೊಬೈಲ್‌ಗಳನ್ನು ನೀಡಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಮೊಬೈಲ್‌ಗಳನ್ನು ಚೀಲದಲ್ಲಿ ವಾಪಸ್ ನೀಡಿದರು. ಮೊಬೈಲ್‌ಗಳು ಪದೇ ಪದೇ ರಿಪೇರಿಗೆ ಬರುತ್ತಿದ್ದು, ಸ್ವಂತ ಖರ್ಚಿನಲ್ಲಿ ಮೊಬೈಲ್ ರಿಪೇರಿ ಮಾಡಿಸಿಕೊಳ್ಳಲಾಗುತ್ತಿದೆ. ಕೇವಲ ನಮ್ಮ ಇಲಾಖೆಗೆ ನೀಡಿದ ಕೆಲಸವನ್ನು ಮೊಬೈಲ್‌ನಲ್ಲಿ ಮಾಡಲು ಕೊಟ್ಟಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಬೇರೆ ಬೇರೆ ಇಲಾಖೆಗಳ ಕೆಲಸವನ್ನೂ ಇದೇ ಮೊಬೈಲ್‌ನಲ್ಲಿ ಮಾಡಲು ಹೇಳುತ್ತಿರುವುದರಿಂದ ನಮಗೆ ಕಿರಿಕಿರಿಯಾಗುತ್ತಿದೆ ಎಂದು ಅಂಗನವಾಡಿ ಶಿಕ್ಷಕಿಯರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.