ಮೊಬೈಲ್ ಟಾರ್ಚ್ ಬೆಳಗಿಸುವ ಮೂಲಕ ಮತದಾನ ಜಾಗೃತಿ

0
132
MY Vote

ಬಾಗಲಕೋಟೆ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಸ್ವೀಪ್‍ನಡಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಾವಿರಾರು ಜನ ಮೊಬೈಲ್ ಟಾರ್ಚ್ ಬೆಳಗಿಸುವುದರ ಮೂಲಕ ವಿನೂತನ ಪ್ರಯೋಗಕ್ಕೆ ಶನಿವಾರ ಜಿಲ್ಲಾಡಳಿತ ಮುಂದಾಯಿತು.
ಬಾಗಲಕೋಟೆ ಮೈ ವೋಟ್ ಮೈ ಫ್ಯೂಚರ್ 2023 (ನಮ್ಮ ಮತ ನಮ್ಮ ಭವಿಷ್ಯ) ಎಂಬ ಘೋಷ ವ್ಯಾಕ್ಯವನ್ನು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮೂಡುವಂತೆ ಮಾಡಿ ಎಲ್ಲರ ಗಮನ ಸೆಳೆಯಲಾಯಿತು. ಇಂತಹ ವಿನೂತನ ಪ್ರಯೋಗದ ಮೂಲಕ ಮತದಾನ ಮಹತ್ವನ್ನು ಸಾರಲು ಜಿಲ್ಲೆಯಾದ್ಯಂತ ಮತದಾನ ಜಾಗೃತಿಗೆ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ, ಜಿಪಂ‌ ಸಿಇಓ ಟಿ.ಭೂಬಾಲನ್ ಜಂಟಿಯಾಗಿ ಚಾಲನೆ ನೀಡಿದರು.

Previous articleಹಾಲಿ-ಮಾಜಿ ಮಧ್ಯೆ ನೇಕಾರ-ಸ್ಥಳೀಯ ಪೈಪೋಟಿ
Next articleಭೀಕರ ಅಪಘಾತ: ನವ ದಂಪತಿ ಸ್ಥಳದಲ್ಲೇ ಸಾವು