Home Advertisement
Home ತಾಜಾ ಸುದ್ದಿ ಮೊದಲು ಕಾಂಗ್ರೆಸ್ ಜೋಡೊ ಮಾಡಲಿ, ದೇಶ ಜೋಡೊ ಆ ಮೇಲೆ ಮಾಡಲಿ: ಕೇಂದ್ರ ಸಚಿವ ಜೋಶಿ...

ಮೊದಲು ಕಾಂಗ್ರೆಸ್ ಜೋಡೊ ಮಾಡಲಿ, ದೇಶ ಜೋಡೊ ಆ ಮೇಲೆ ಮಾಡಲಿ: ಕೇಂದ್ರ ಸಚಿವ ಜೋಶಿ ವ್ಯಂಗ್ಯ

0
130
ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಮೊದಲು ತಮ್ಮ ಕಾಂಗ್ರೆಸ್ ಜೋಡೊ ಮಾಡಲಿ. ಆ ಮೇಲೆ ಬೇಕಾದ್ರೆ ದೇಶ ಜೋಡೊ ಮಾಡಲಿ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ.ಯಾಕೆಂದರೆ ಅವರು ಸೀಸನ್ಡ್ ಪೊಲಿಟಿಷಿಯನ್. ಲೋಕಸಭಾ ಅಧಿವೇಶನ ಶುರುವಾಗುತ್ತಿದ್ದಂತೆಯೇ ವಿದೇಶಕ್ಕೆ ಹೋಗುತ್ತಾರೆ ಎಂದರು.
ಯಾರೊ ಬರೆದುಕೊಟ್ಟಿದ್ದನ್ನು ಓದುವ ರಾಹುಲ್ ಗಾಂಧಿಗೆ ಮಾನ ಮರ್ಯಾದೆ ಇಲ್ಲ. ಬರೆದು ಕೊಟ್ಟಿದ್ದನ್ನು ಓದುತ್ತಾರೆ. ಓದಿದ ಬಳಿಕ ಅವರನ್ನು ನೀವು ಏನು ಓದಿದ್ರಿ ಎಂದು ಕೇಳಿದರೆ ಏನೂ ಗೊತ್ತಿರುವುದಿಲ್ಲ.ಇಂಥವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಯುಪಿಎ ಸರ್ಕಾರ ಹತ್ತು ವರ್ಷ ಅಧಿಕಾರದಲ್ಲಿದ್ದಾಗ ದಿನಕ್ಕೊಂದು ದೊಡ್ಡ ಹಗರಣಗಳು ನಡೆದಿದ್ದವು ಎಂದು ಹೇಳಿದರು.
ದೇಶದ ಜನರು ಯಾರ ಪರ ಇದ್ದಾರೆ ಎಂಬುದು 2014, 2017 ರ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ನಕಲಿ ಗಾಂಧಿ ಫ್ಯಾಮಿಲಿ ಮತ್ತು ಅವರ ಪಟಾಲಂ ನ್ನು ದೇಶದ ಜನರು ಯಾವುದೇ ಕಾರಣಕ್ಕೂ ನಂಬುವುದಿಲ್ಲ ಎಂದರು.

Previous articleಮೆಡಿಕಲ್ ಕಾಲೇಜು, ಯುಕೆಪಿ ಅನುಷ್ಠಾನಕ್ಕೆ ಆಗ್ರಹಿಸಿ AAP ಧರಣಿ
Next articleದಾವಣಗೆರೆಯಲ್ಲಿ ಮಳೆ : ಕೊಚ್ಚಿ ಹೋದ ಭದ್ರಾ ನಾಲೆ