ಮೆಟ್ರೊ ಹಳಿಯ ಮೇಲೆ ಬಿದ್ದ ಮರದ ಕೊಂಬೆ: ಸಂಚಾರ ವ್ಯತ್ಯಯ

0
31

ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ ಮರದ ಕೊಂಬೆ ಮುರಿದು ಬಿದ್ದಿರುವ ಪರಿಣಾಮ ಸಂಚಾರ ವ್ಯತ್ಯಯ ಆಗಲಿದೆ ಎಂದು ನಮ್ಮ ಮೆಟ್ರೊ ತಿಳಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಟ್ರಿನಿಟಿ ನಿಲ್ದಾಣ–ಎಂ.ಜಿ. ರಸ್ತೆ ನಡುವೆ ಹಳಿಗಳ ಮೆಲೆ ಭಾನುವಾರ ರಾತ್ರಿ 7.25ರ ಹೊತ್ತಿಗೆ ಮರದ ಕೊಂಬೆ ಮುರಿದು ಬಿತ್ತು. ಇದರಿಂದ ಈ ಮಾರ್ಗದಲ್ಲಿ ಸುಮಾರು 20 ನಿಮಿಷ ಮೆಟ್ರೊ ಸಂಚಾರ ಸ್ಥಗಿತಗೊಂಡಿದ್ದು, ಮರದ ಕೊಂಬೆಯನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದು. ತೆರವಾದ ಕೂಡಲೇ ಎಂ.ಜಿ. ರಸ್ತೆ– ಇಂದಿರಾನಗರ ನಡುವೆ ಮೆಟ್ರೊ ರೈಲು ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದಿದ್ದಾರೆ

Previous articleಶ್ರೀರಾಮ ಸೇನೆ ಹೆಲ್ಪ್ ಲೈನ್‌ಗೆ ಬೆದರಿಕೆ ಕರೆಗಳು
Next articleಕರ್ನಾಟಕದ ಇತಿಹಾಸ ತಜ್ಞ ಕೆಳದಿ ಗುಂಡಾ ಜೋಯಿಸ್‌ ನಿಧನ