ಧಾರವಾಡ: ಮುಸ್ಲಿಮರ ಮೀಸಲಾತಿ ಕುರಿತು ಈಗಾಗಲೇ ಸರ್ವೋಚ್ಚ ನ್ಯಾಯಾಲಯದ ಪ್ರಕರಣದ ವಿಚಾರಣೆ ಪೂರ್ಣವಾಗುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಧಾರವಾಡದಲ್ಲಿ ಮುಸ್ಲಿಮರಿಗೆ ಮೀಸಲಾತಿ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ವೋಚ್ಚ ನ್ಯಾಯಾಲಯವು ಮೇ 9ಕ್ಕೆ ದಿನಾಂಕ ಮುಂದೂಡಿದ್ದು, ಕೋರ್ಟ್ ನಿಂದ ಯಾವುದೇ ತಡೆಯಾಜ್ಞೆ ಸಿಕ್ಕಿಲ್ಲ ಎಂದರು.