ಮುರುಘಾಶ್ರೀ ಘಟನೆ ನಡೆದಿದ್ದು ದುರದೃಷ್ಟಕರ

0
36
ಜಗದೀಶ ಶೆಟ್ಟರ್

ಹುಬ್ಬಳ್ಳಿ: ಚಿತ್ರದುರ್ಗದ ಮುರುಘಾ ಶರಣರ ಘಟನೆ ನಡೆದಿದ್ದು ದುರದೃಷ್ಟಕರ. ಈ ಬಗ್ಗೆ ನಾವೇ ಹಣೆಪಟ್ಟಿ ಕಟ್ಟುವುದು ಸರಿಯಲ್ಲ. ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮಾತನಾಡುವುದು ಸರಿಯಲ್ಲ. ಪೊಲೀಸ್ ತನಿಖೆ ನಡೆದಿದೆ. ಕಾನೂನು ಕ್ರಮ ಕೈಗೊಳ್ಳಲಿದೆ. ಈ ಘಟನೆಯನ್ನು ಸಾರ್ವತ್ರಿಕರಣಗೊಳಿಸುವ ಅಗತ್ಯವಿಲ್ಲ ಎಂದರು.

Previous articleಮಳೆಯಿಂದ ಜಲಾವೃತವಾದ ಯಲ್ಲಮ್ಮ ದೇವಸ್ಥಾನ
Next articleಇಬ್ಬರು ಪೊಲೀಸರು ನಾಪತ್ತೆ: ಕೊಚ್ಚಿ ಹೋದ ಶಂಕೆ