ಮುನಿಗಳ ಡೈರಿಯ ಹಿಂದೆ ಬಿದ್ದ ಖಾಕಿಪಡೆ

0
11

ಚಿಕ್ಕೋಡಿ: ಹಿರೇಕೋಡಿಯ ಜೈನಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯ ರಹಸ್ಯ ಭೇದಿಸಲು ಚಿಕ್ಕೋಡಿ ಪೊಲೀಸರು ಎರಡನೇ ದಿನವೂ ವಿಚಾರಣೆ ತೀವ್ರಗೊಳಿಸಿದ್ದಾರೆ.
ಈ ಮಧ್ಯೆ ಮುನಿಗಳ ವೈಯಕ್ತಿಕ ಡೈರಿ ನಾಪತ್ತೆಯ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸಿರುವ ಪೊಲೀಸರು ಡೈರಿ ಸುಟ್ಟಿರುವ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಸುಟ್ಟ ಬೂದಿ ಹಾಗೂ ಮಣ್ಣು ಸಂಗ್ರಹಿಸಿದ್ದು, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲು ಸಿದ್ಧತೆ ನಡೆಸಿದ್ದಾರೆ.
ಮತ್ತೊಂದೆಡೆ ನಾಲ್ಕು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಇವುಗಳನ್ನು ಸಹ ಎಫ್ಎಸ್ ಎಲ್ ಗೆ ರವಾನಿಸಲಿದ್ದಾರೆ. ಇವುಗಳಲ್ಲಿ ಆರೋಪಿಗಳ ಎರಡು ಹಾಗೂ ಮುನಿಗಳು ಬಳಿಯಿದ್ದ ಎರಡು ಮೊಬೈಲ್ ಗಳು ಸೇರಿವೆ.
ಮೊಬೈಲ್ ಗಳಲ್ಲಿನ ಕರೆದಾಖಲೆ, ಮೆಸೇಜ್, ವಿಡಿಯೋ ಹಾಗೂ ಪೊಟೊಗಳಿಂದ ಇನ್ನಷ್ಟು ರಹಸ್ಯ ಬಯಲಾಗಬಹುದಾ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ.

Previous articleಶಾಸಕ ಮುನಿರತ್ನ ವಿರುದ್ಧ ಎಫ್​ಐಆರ್ ದಾಖಲು
Next articleಇಡಿ ನಿರ್ದೇಶಕರ ನೇಮಕ ಕೇಂದ್ರಕ್ಕೆ ಸುಪ್ರೀಂ ತಪರಾಕಿ