ಹುಬ್ಬಳ್ಳಿ : ಮುಂಗಾರು ಇಡೀ ಕರ್ನಾಟಕ ಆವರಿಸಲು ತಡವಾಗಿದ್ದರೂ ಮುಂದಿನ 5 ದಿನಗಳಲ್ಲಿ ಉತ್ತರ ಒಳನಾಡಿನಲ್ಲಿ ಚುರುಕಾಗಲಿದೆ.
ಕಳೆದ ದಿನದಿಂದ ಮಳೆ ಆರಂಭವಾಗಿದ್ದು, ಮುಂದಿನ 24 ತಾಸು ಇದೇ ರೀತಿ ಮಳೆ ಇರಲಿದೆ. ಜುಲೈ 7 ರವರೆಗೆ ಇದೇ ರೀತಿಯ ಮೋಡಗಳು ಇರಲಿದ್ದು, ದಿನಕ್ಕೆ 5 ರಿಂದ 10 ಮಿ.ಮೀ ಮಳೆಯಾಗಲಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಆರ್.ಎಚ್. ಪಾಟೀಲ್ ತಿಳಿಸಿದ್ದಾರೆ.
ಮಲೆನಾಡು ಶರಗು ಪ್ರದೇಶದಲ್ಲಿ 10 ರಿಂದ 15 ಮಿ.ಮೀ, ಪಶ್ಚಿಮಘಟ್ಟ ಪ್ರದೇಶದಲ್ಲಿ, ಕರಾವಳಿ ಪ್ರದೇಶದಲ್ಲಿ ದಿನಕ್ಕೆ 25 ರಿಂದ 75 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನಲ್ಲಿ ಹೆಚ್ಚಿನ ಭಾಗದಲ್ಲಿ ಮೋಡ ಕವಿದಿತ್ತು. 1 ರಿಂದ 4 ಮಿ.ಮೀ ಮಳೆಯಾಗಿದೆ. ಉತ್ತರ ಕನ್ನೆ ಮತ್ತು ಬೆಳಗಾವಿ ಜಿಲ್ಲೆಯ ಖಾನಾಪುರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.(15-65 ಮಿ.ಮೀ). ಕಾರ್ಕಳ ತಾಲ್ಲೂಕಿನ ನಾಡ್ಪಾಲು ಹೋಬಳಿಯಲ್ಲಿ 104 ಮಿ.ಮೀ ಮಳೆಯಾಗಿದೆ ಎಂದು ಹೇಳಿದ್ದಾರೆ.