ಹುಬ್ಬಳ್ಳಿ: ಮುಂದಿನ ಮೂರು ದಿನಗಳಲ್ಲಿ ಕರ್ನಾಟಕದ ಉತ್ತರ ಒಳನಾಡಿನ ಭಾಗಗಳಲ್ಲಿ ತಾಪಮಾನ ಏರಿಕೆಯಾಗುತ್ತಲೇ ಇರುತ್ತದೆ. ಆದಾಗ್ಯೂ ಮುಂದಿನ 5 ದಿನಗಳಲ್ಲಿ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಲಘು , ಮಧ್ಯಮ ಮಳೆ ಸಂಭವಿಸುವ ಸಾಧ್ಯತೆಯಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನಶಾಸ್ತç ವಿಭಾಗದ ಪ್ರಧಾನ ನೋಡಲ್ ಅಧಿಕಾರಿ ಡಾ.ಆರ್.ಎಚ್.ಪಾಟೀಲ.
ಮುಂದಿನ ಮೂರು ದಿನಗಳಲ್ಲಿ ಬಂಗಾಳ ಕೊಲ್ಲಿ, ಅಂಡಮಾನ್ ಸಸಮುದ್ರ ಮತ್ತು ಅಂಡಮಾನ್ ನಿಕೋಬಾರ ದ್ವಿಪಗಳು ಸೇರಿದಂತೆ ನೈಋತ್ಯ ಮುಂಗಾರಿನ ಮುನ್ನಡೆಗೆ ಮತ್ತಷ್ಟು ಪರಿಸ್ಥಿತಿ ಅನುಕೂಲಕರವಾಗಿದೆ ಎಂದಿದ್ದಾರೆ.
ರೈತರು ತಮ್ಮ ಜಮೀನುಗಳನ್ನು ಬಿತ್ತನೆಗೆ ಸಿದ್ದವಾಗಿಟ್ಟುಕೊಳ್ಳಬೇಕು. ಮುಂಗಾರ ವಿಳಂಬವಾಗುವ ಸಾಧ್ಯತೆ ಇರುವ ಹಿನ್ನೆಲೆ ನಿಜವಾಗಿ ಬಂದರೆ, ಬಿತ್ತನೆ ವಿಳಂಬವಾದರೆ, ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರು ಯೋಚಿಸಬಹುದು ಎಂದು ತಿಳಿಸಿದ್ದಾರೆ.