ಮಾಜಿ ಸಿಎಂಗೆ ಕ್ಷೇತ್ರ ಸಿಗದಿರುವುದು ನಾಚಿಕೆಗೇಡು

0
15
ನಿರಾಣಿ

ಹುಬ್ಬಳ್ಳಿ: ಸಿದ್ದರಾಮಯ್ಯ ಜಾತಿ ಕಾರಣಕ್ಕೆ ಬಾದಾಮಿಗೆ ಬಂದರು. ಒಬ್ಬ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರಿಗೆ ಕ್ಷೇತ್ರ ಸಿಗುತ್ತಿಲ್ಲ ಎಂದರೇ ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ 30 ಸಾವಿರ ಮತಗಳ ಅಂತರದಿಂದ ಸೋತರು. ಅಲ್ಲಿಂದ ಜಾತಿ ಕಾರಣಕ್ಕೆ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ಬಂದಿದ್ದರು. ಬಾದಾಮಿಯಲ್ಲಿ ಮತ್ತೆ ಸೋಲುತ್ತೇನೆ ಎನ್ನುವ ಕಾರಣದಿಂದ ಕೋಲಾರಕ್ಕೆ ಹೋಗುವ ಪ್ರಯತ್ನ ಮಾಡಿದರು. ಕೋಲಾರದಲ್ಲಿ ಸರ್ವೇ ಮಾಡಿಸಿದ ನಂತರ ಅತೀ ಹೆಚ್ಚು ಮತಗಳ ಅಂತದಿಂದ ಸೋಲುತ್ತಾರೆ ಎಂಬುವುದು ಗೊತ್ತಾಗಿದೆ. ಇಂದು ಅವರು ಹೆಸರಿಗೆ ಮಾತ್ರ ವರುಣಾ ಕ್ಷೇತ್ರ ಎಂದು ಹೇಳುತ್ತ ಮತ್ತೆ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ ಎಂದರು.

Previous articleಕಾಂಗ್ರೆಸ್‌ನಿಂದ ಬೋಗಸ್ ಕಾರ್ಡ್‌ಗಳ ಬಿಡುಗಡೆ ಸರಣಿ
Next articleಬಿಜೆಪಿಯ ಮತ್ತೊಂದು ವಿಕೆಟ್ ಪತನ: ಚಿಂಚನಸೂರ ರಾಜೀನಾಮೆ