ಮಸೀದಿ ಮೇಲೆ ಭಗವಾಧ್ವಜ

0
32

ಬೀದರ್‌: ಕಿಡಿಗೇಡಿಗಳು ಮಸೀದಿ ಮೇಲೆ ಭಗವಾಧ್ವಜ ಹಾರಿಸಿ ಪರಾರಿಯಾದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಬಸವಕಲ್ಯಾಣ ತಾಲೂಕಿನ ಧನ್ನೂರಾ ಕೆ ಗ್ರಾಮದ ಹೊರ ವಲಯದ ಜಾಮೀಯಾ ಮಸೀದಿ ಮೇಲೆ ರಾತ್ರಿ ಸಮಯದಲ್ಲಿ ಯಾರು ಇಲ್ಲದ ವೇಳೆ ಕಿಡಿಗೇಡಿಗಳು ಭಗವಾಧ್ವಜ ಹಾರಿಸಿದ್ದಾರೆ. ಬೆಳಗ್ಗೆ ವಿಷಯ ತಿಳಿದ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಬಸವಕಲ್ಯಾಣ ಗ್ರಾಮೀಣ ಠಾಣೆ ಪೊಲೀಸರು ಗ್ರಾಮಸ್ಥರ ಮನವೊಲಿಸಿ ಭಗವಾಧ್ವಜ ತೆಗೆಸಿದ್ದಾರೆ.
ಬಳಿಕ ಗ್ರಾಮಸ್ಥರೊಂದಿಗೆ ಗ್ರಾಪಂ ಕಚೇರಿಯಲ್ಲಿ ಶಾಂತಿ ಸಭೆ ಮಾಡಿದ ಸಿಪಿಐ ನ್ಯಾಮೇಗೌಡ ಕೂಡಲೇ ಕಿಡಿಗೇಡಿಗಳನ್ನು‌ ಬಂಧಿಸುತ್ತೇವೆ. ಗ್ರಾಮದಲ್ಲಿ ಶಾಂತಿ ಕಾಪಾಡಿ ಎಂದು ಮನವಿ ಮಾಡಿದರು.

Previous articleಮಹಿಳೆಯರಿಗೆ ಕರ್ನಾಟಕದಲ್ಲಿ ಕೇಡುಗಾಲ ಶುರುವಾಗಿದೆ
Next articleಕಾಂಗ್ರೆಸ್‌ನಿಂದ ಸ್ಟಾಲಿನ್​ಗೂ ನೀರು ಫ್ರೀ