ಮಸಣದಲ್ಲಿ ಮಿಡಿದ ಆಕಾಶ ಹೃದಯ

0
21

ನವಲಗುಂದ ತಾಲೂಕ ಬಸಾಪುರ ಗ್ರಾಮದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಒಂದೂವರೆ ವರ್ಷದ ಆಕಾಶ ಬಸವರಾಜ ಪೂಜಾರ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಧಾಖಲಾಗಿದ್ದ, ಚಿಕಿತ್ಸೆ ಫಲಕಾರಿಯಾಗದ ಹಿನ್ನೇಲೆ ಆಕಾಶ ಹೃದಯ ಬಡಿತ ನಿಲ್ಲಿಸಿದ್ದಾನೆ ಎಂದು ಕಿಮ್ಸ್ ವೈದ್ಯರು ಹೇಳಿದ್ದರು.
ಮೃತಪಟ್ಟಿದ್ದಾನೆಂದು ಘೋಷಿಸಿದ್ದ ಆಕಾಶನನ್ನು ಊರಲ್ಲಿಯೇ ಅಂತ್ಯಕ್ರೀಯೆ ಮಾಡಲು ಆತನ ಪಾಲಕರು ಬಸಾಪುರ ಗ್ರಾಮಕ್ಕೆ ಕರೆದುಕೊಂಡು ಬಂದರು.
ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನ ನಡೆದಿತ್ತು. ಇನ್ನೇನು ಮೃತ ಬಾಲಕನ ಬಾಯಲ್ಲಿ ಎರಡು ಹನಿ ನೀರು ಹಾಕುತ್ತಿದ್ದಂತೆ ಬಾಲಕ ಉಸಿರಾಡಿದ್ದಾನೆ. ಬಾಲಕ ಬದುಕುಳಿದಿದ್ದಾನೆ ಎಂದು ತಿಳಿದ ಅಲ್ಲಿ ಸೇರಿದ್ದ ಜನ, ಆಕಾಶನನ್ನು ಕೂಡಲೇ ನವಲಗುಂದ ಆಸ್ಪತ್ರೆಗೆ ಧಾಖಲಿಸಿದ್ದಾರೆ. ವೆಂಟಿಲೇಟರ ಕೊರತೆಯಿಂದ ಸಧ್ಯ ಆಕಾಶನನ್ನು ಮತ್ತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಧಾಖಲಿಸಲಾಗಿದ್ದು ಐ ಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

Previous articleಬೆಂಗಳೂರು: ದೇಶದ ಮೊದಲ 3ಡಿ ಮುದ್ರಿತ ‌ಅಂಚೆ ಕಚೇರಿ
Next articleಚಿತ್ರದುರ್ಗ: ನಾಲ್ವರಿಗೆ ವಾಂತಿ ಬೇದಿ