ಮಧುವಣಗಿತ್ತಿಯಂತೆ ಸಿಂಗಾರಗೊಂಡ ಬನಹಟ್ಟಿ ಬಸ್ ನಿಲ್ದಾಣ

0
22

ಬಾಗಲಕೋಟೆ: ರವಿವಾರ ರಾಜ್ಯ ಸರ್ಕಾರದ ಮೊದಲ ಗ್ಯಾರಂಟಿ ಬಿಡುಗಡೆಗೊಳ್ಳಲಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ನಿಮಿತ್ತ ಬನಹಟ್ಟಿ ಬಸ್ ನಿಲ್ದಾಣವನ್ನು ಸ್ವಚ್ಛತಾ ಕಾರ್ಯಕ್ರಮದೊಂದಿಗೆ ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಿ ಮಧುವಣಗಿತ್ತಿಯಂತೆ ಸಿಂಗಾರಗೊಳಿಸಿದ್ದಾರೆ.
ಶನಿವಾರ ರಾತ್ರಿ ಹೊತ್ತು ಆಗಮಿಸುತ್ತಿದ್ದ ಪ್ರಯಾಣಿಕರು ಮಾತ್ರ ಬಸ್ ನಿಲ್ದಾಣ ಅಲಂಕಾರಗೊಂಡಿರುವದನ್ನು ನೋಡಿ ಹುಬ್ಬೇರಿಸುತ್ತಿದ್ದರೆ, ಇದೇ ಪ್ರಥಮ ಬಾರಿಗೆ ಬಸ್ ನಿಲ್ದಾಣ ವಿದ್ಯುತ್ ದೀಪಾಲಂಕಾರವಾಗಿರುವದು ವಿಶೇಷತೆ ಪಡೆಯುವಲ್ಲಿ ಕಾರಣವಾಗಿದೆ.
ಬಾಗಲಕೋಟೆ ಜಿಲ್ಲಾ ವ್ಯವಸ್ಥಾಪಕರು ಹಾಗೂ ಜಮಖಂಡಿ ಘಟಕ ವ್ಯವಸ್ಥಾಪಕರ ಆದೇಶದ ಮೆರೆಗೆ ಬಸ್ ನಿಲ್ದಾಣದ ದೀಪಾಲಂಕಾರ ಮಾಡಿದ್ದು, ಬಸ್ ನಿಲ್ದಾಣಕ್ಕೆ ಹೊಸ ಮೆರಗು ಬರುವಲ್ಲಿ ಕಾರಣವಾಗಿದೆ ಎಂದು ಸಾರಿಗೆ ನಿಯಂತ್ರಕ ಗಿರೀಶ ಮರನೂರ ಹೇಳಿದರು.

Previous articleಓಯಾಸಿಸ್‌ನಂತಾದ ಕೃಷ್ಣೆಯ ಒಡಲು: ಹಿಪ್ಪರಗಿ ಜಲಾಶಯ ಸಂಪೂರ್ಣ ಖಾಲಿ ಖಾಲಿ
Next articleಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ 273 ಕೋಟಿ ರೂ. ಅನುದಾನ