ಮತ್ತೊಮ್ಮೆ ಕರ್ನಾಟಕ ಯಾತ್ರಾರ್ಥಿಗಳಿಗೆ ಸಹಾಯ ಮಾಡಿದ ಸಂತೋಷ್ ಲಾಡ್

0
11
ಲಾಡ್

ಹುಬ್ಬಳ್ಳಿ: ಓಡಿಸ್ಸಾದಲ್ಲಿ ಇತ್ತೀಚಿಗೆ ನಡೆದ ರೈಲು ದುರಂತದ ಭೀಕರತೆ ಯಾವ ಪ್ರಮಾಣದಲ್ಲಿ ಇತ್ತು ಎನ್ನುವುದು ಇಡೀ ದೇಶಕ್ಕೆ ತಿಳಿದ ವಿಷಯ. ಅಲ್ಲದೆ ಕನ್ನಡಿಗರ ರಕ್ಷಣೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಟೊಂಕ ಕಟ್ಟಿ ನಿಂತು ಹಗಲಿರುಳೆನ್ನದೇ ಕಾರ್ಯಪ್ರವೃತ್ತರಾಗಿದ್ದು ನಿಮಗೆಲ್ಲ ಗೊತ್ತೇ ಇದೆ.
ಈ ಭೀಕರ ರೈಲು ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದ ಚಿಕ್ಕಮಗಳೂರು ಜಿಲ್ಲೆ ಮೂಲದ 110 ಜನ ಜೈನ ಯಾತ್ರಾರ್ಥಿಗಳು ಶ್ರೀಕ್ಷೇತ್ರ ಸಮ್ಮೇದ ಶಿಖರ್ಜಿ ಯಾತ್ರೆ ಮುಗಿಸಿಕೊಂಡು ಪಾಟ್ನಾದಿಂದ ರಾಜ್ಯಕ್ಕೆ ರೈಲು ಮೂಲಕ ಹಿಂದಿರುಗುತ್ತಿದ್ದರು.
ಈ ವೇಳೆ ಯಾತ್ರಾರ್ಥಿಗಳ ಪೈಕಿ 72 ವರ್ಷದ ಧರ್ಮ ಪಾಲಯ್ಯ ಎಂಬುವವರು ತೀವ್ರ ಹೃದಯಾಘಾತದಿಂದ ರೈಲಿನಲ್ಲೇ‌ ನಿಧನಹೊಂದಿದ್ದರು.
ಮೃತ ದೇಹವು ಮಿರ್ಜಾಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಇದ್ದು ಮೃತ ದೇಹವನ್ನು ಊರಿಗೆ ತರುವ ವ್ಯವಸ್ಥೆ ಮಾಡಲು ಸಹಾಯ ಮಾಡಿ ಎಂದು ಹರ್ಷೇಂದ್ರ ಜೈನ್ ಎನ್ನುವವರು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರಲ್ಲಿ ಮನವಿ ಮಾಡಿದ್ದರು. ಲಾಡ್ ಅವರು ಮನವಿಗೆ ತಕ್ಷಣವೇ ಸ್ಪಂದಿಸಿದ್ದು, ತಮ್ಮ ಸ್ವಂತ ಖರ್ಚಿನ ಮೂಲಕ ಮೃತ ದೇಹವನ್ನು ಏರ್ ಲಿಫ್ಟ್ ಮಾಡಿಸುವ ಹಾಗೂ ಅವರ ಕುಟುಂಬದ 5 ಜನರನ್ನು ವಿಮಾನದ ಮೂಲಕ ರಾಜ್ಯಕ್ಕೆ ಕರೆತರಲು ವ್ಯವಸ್ಥೆ ಮಾಡಿದ್ದಾರೆ.
ಇಂದು ಮಧ್ಯಾಹ್ನ 4:30 ಗಂಟೆಗೆ ಶವ ವಾರಣಾಸಿಯಿಂದ ಬೆಂಗಳೂರು ತಲುಪಲಿದೆ.

Previous articleಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಪಟ್ಟಿ ಪ್ರದರ್ಶನಕ್ಕೆ ಯತ್ನ: ಪ್ರತಿಭಟನಾಕಾರರ ಬಂಧನ
Next articleಗ್ಯಾರಂಟಿಗಳ ಜಾರಿಗೆ ಬದ್ಧ: ಸಚಿವ ಖರ್ಗೆ