ಚಿಕ್ಕೋಡಿ: ಶೀಘ್ರವೇ ಬರಲಿರುವ ಚುನಾವಣಾ ಕಣ ಈಗಲೇ ರಂಗೇರುತ್ತಿದ್ದು ಮತ್ತೊಬ್ಬ ಪೊಲೀಸ ಅಧಿಕಾರಿ ಸ್ಪರ್ಧೆಗೆ ಸಿದ್ಧವಾಗಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಬೀಸನಕೊಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಣಿಯಾಗುತ್ತಿದ್ದಾರೆ.
ವಿಜಯಪುರ ಪೊಲೀಸ್ ಠಾಣೆ ಸಿಪಿಐ ಬೀಸನಕೊಪ್ಪ ಮೂಲತಃ ರಾಯಬಾಗ ತಾಲೂಕು ಸವಸುದ್ದಿ ಗ್ರಾಮದವರು. ಸಿಪಿಐ ಹುದ್ದೆಗೆ ರಾಜೀನಾಮೆ ನೀಡಿ ಅಥಣಿ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನೂ ಖಚಿತ ಪಟ್ಟಿಲ್ಲ.