ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಆದೇಶ: ರೈತರಿಂದ ನದಿಗಿಳಿದು ಪ್ರತಿಭಟನೆ

0
17

ಶ್ರೀರಂಗಪಟ್ಟಣ: ಮುಂದಿನ 15 ದಿನಗಳ‌ ವರೆಗೆ ಮತ್ತೆ ತಮಿಳುನಾಡಿಗೆ ಪ್ರತೀ ನಿತ್ಯ 2,600 ಕ್ಯೂಸೆಕ್ ನೀರು ಹರಿಸಬೇಕು ಎಂಬ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ರೈತ ಮುಖಂಡರು ಕಾವೇರ ನದಿಗಿಳಿದು ಪ್ರತಿಭಟನೆ ನಡೆಸಿದರು.
ಭೂಮಿತಾಯಿ‌ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಸಮಿತಿ‌ ಅದ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ರೈತರು ಪಟ್ಟಣದ ಸ್ನಾನಘಟ್ಟ ಬಳಿಯ ಕಾವೇರಿ ನದಿಗಿಳಿದು ಕಾವೇರಿ ಪ್ರಾಧಿಕಾರ‌ ಹಾಗೂ ರಾಜ್ಯ ಸರ್ಕಾರದ‌ ವಿರುದ್ದ ಆಕ್ರೋಷ ವ್ಯಕ್ತ ಪಡಿಸಿದರು.
ರಾಜ್ಯದ ಹಿತವನ್ನು ಕಾಪಾಡಲು ಮುಂದಾಗದ ರಾಜ್ಯ ಸರ್ಕಾರ ‌ ತಮಿಳುನಾಡಿನ ಓಲೈಕೆಗಾಗಿ ಕಾವೇರಿ ನಿರ್ವಹಣಾ ಮಂಡಳಿ ಪ್ರಾಧಿಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ನ್ಯಾಯ ಸಮ್ಮತವಲ್ಲದ ಈ ಆದೇಶವನ್ನು‌‌ ಧಿಕ್ಕರಿಸುವ ತಾಕತ್ತು‌ ನಮ್ಮ ರಾಜ್ಯ ಸರ್ಕಾರಕ್ಕಿಲ್ಲ. ಕಾವೇರಿ‌ ನೀರಿನ ವಿಷಯದಲ್ಲಿ ರಾಜ್ಯದ ಶಾಸಕರು ಮತ್ತು ಸಂಸದರು ಧ್ವನಿಯೆತ್ತಬೇಕು. ರಾಜ್ಯದಲ್ಲಿನ ನೀರಿನ ಸಂಗ್ರಹ ಹಾಗೂ ಮಳೆಯ ಪ್ರಮಾಣದ ಬಗ್ಗೆ ಸೂಕ್ತ ದಾಖಲಾತಿ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ದು ಆಕ್ರೋಷ ವ್ಯಕ್ತ ಪಡಿಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.

Previous articleನೇತ್ರಾವತಿ ಸೇತುವೆಯಲ್ಲಿ ಪತ್ತೆಯಾದ ಕಾರು: ವ್ಯಕ್ತಿ ಆತ್ಮಹತ್ಯೆ ಶಂಕೆ
Next articleಮೊಬೈಲ್‌ನಲ್ಲಿ ಮಾತನಾಡುವಾಗ ಬಡಿದ ಸಿಡಿಲು: ಯುವಕ ಸಾವು