ಮತದಾನದ ಹಕ್ಕು ಚಲಾಯಿಸಿದ ಶತಾಯುಷಿಗಳು

0
6

ಬಳ್ಳಾರಿ: ಜಿಲ್ಲೆಯಲ್ಲಿ ಹಲವು ವಿಶೇಷ ಮತದಾರರು ಮತದಾನ ಮಾಡಿ ಅದರ ಮಹತ್ವ ಸಾರಿದ್ದಾರೆ.
ಬಳ್ಳಾರಿ ನಗರದ ಹಿರಿಯ ಪತ್ರಕರ್ತ ಎಚ್.ಎಂ.ಮಹೇಂದ್ರ ಕುಮಾರ್ ಅವರ ತಾಯಿ 100 ವರ್ಷದ ಎಚ್.ಎಂ.ಶಾಂತವೀರಮ್ಮ ನಗರದ ರಾಜ್ಯ ರಸ್ತೆ ಸಾರಿಗೆ ನಿಗಮದ ಉಗ್ರಾಣದಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ತಾಲ್ಲೂಕಿನ ಕಮ್ಮರಚೇಡು ಗ್ರಾಮದ 108 ವರ್ಷದ ಸಂಜಮ್ಮ ಮನೆಯಿಂದ ಮತದಾನ ಮಾಡಲು ಅವಕಾಶ ಇದ್ದರೂ ಮತಗಟ್ಟೆಗೆ ವೀಲ್ ಚೇರ್ ನಲ್ಲಿ ಬಂದು ಮತ ಚಲಾಯಿಸಿದರು.
ಕಾಲಿನಿಂದ ಮತ: ಇನ್ನು ಎರಡೂ ಕೈ ಇಲ್ಲದ ಮುಸ್ತಾಫ ಕೊಳಗಲ್ ಗ್ರಾಮದ ಮತಗಟ್ಟೆಯಲ್ಲಿ ಕಾಲಿನಿಂದ ಮತ ಚಲಾಯಿಸಿ ಕಾಲಿನ ಬೆರಳಿಗೆ ಶಾಹಿ ಹಾಕಿಸಿಕೊಂಡು ಗಮನ ಸೆಳೆದರು.

Previous articleಬೆಳಗಾಗುವುದರೊಳಗೆ ದಿಢೀರ್ ಶ್ರೀಮಂತನಾದ ಅಪರಿಚಿತ ವ್ಯಕ್ತಿ?
Next articleಜನಾದೇಶದ ಮೊಳಕೆಗೆ ಮತದಾನದ ಬೀಜ