ಮಂತ್ರಾಲಯದ ಶ್ರೀರಾಯರ ಮಠಕ್ಕೆ ವಿವಿಧ ಮಠಾಧೀಶರು ಭೇಟಿ

0
20
ಮಂತ್ರಾಲಯ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬುಧವಾರ ವಿವಿಧ ಮಠಾಧೀಶರು ಭೇಟಿ ನೀಡಿದ ಶ್ರೀರಾಯರ ಬೃಂದಾವನ ದರ್ಶನ ಪಡೆದುಕೊಂಡರು. ನಂತರ ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರೊಂದಿಗೆ ವಿವಿಧ ಮಠಾಧೀಶರು ಸಮಾಲೋಚನೆ ನಡೆಸಿದರು. ನಂತರ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಮಂತ್ರಾಕ್ಷತೆ ಸ್ವೀಕರಿಸಿದರು.
ನಂದಿಪುರದ ಶ್ರೀ ಮಹೇಶ್ವರ ಸ್ವಾಮೀಜಿಗಳು, ಬಳ್ಳಾರಿ ಶ್ರೀ ಕಲ್ಯಾಣ ಸ್ವಾಮಿಗಳು, ಮುಜಾಸ್ವಾನುಗ್ಗಿಹಳ್ಳಿಯ ಶ್ರೀ ಮಹೇಶ್ವರ ಸ್ವಾಮೀಜಿ, ಬೆಣ್ಣಿಹಳ್ಳಿಯ ಶ್ರೀ
ಪಂಚಾಕ್ಷರಿ ಸ್ವಾಮೀಜಿಗಳು, ಆಂಧ್ರಪ್ರದೇಶದ ಜಂಗಮರ ಹೊಸಹಳ್ಳಿಯ ಶ್ರೀ ಅಜಾತ ಶಂಭುಲಿಂಗ ಸ್ವಾಮೀಜಿಗಳು, ಕ್ಯಾರಕಟ್ಟಿಯ ಶ್ರೀ ಸಜ್ಜಯ್ಯ ಸ್ವಾಮೀಜಿಗಳು, ಮಲ್ಲಾಪುರದ ಶ್ರೀಚನ್ನಬಸವ ಶಿವಯೋಗಿಗಳು, ಸವದತ್ತಿಯ ಶ್ರೀ ಮಹಾಂತಲಿಂಗ ಸ್ವಾಮೀಜಿಗಳು, ಶ್ರೀಸಂಗಮೇಶ ದೇವರು, ವೀರಾಪುರದ ಶ್ರೀ ಜಡೇಶ ತಾತನವರು, ಮೈನಹಳ್ಳಿಯ ಶ್ರೀಸಿದ್ಧೇಶ್ವರ ಸ್ವಾಮೀಜಿಗಳು, ವಡ್ಡಟ್ಟಿಯ ಶ್ರೀ ವಿಶ್ವೇಶ್ವರ ಸ್ವಾಮೀಜಿಗಳು, ಅಂಬಲದಹಳ್ಳಿಯ ಶ್ರೀ ಉಜ್ಜನೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಶಿಷ್ಯರು ಉಪಸ್ಥಿತರಿದ್ದರು.

Previous articleಮೈನವಿರೇಳಿಸುವ ಮಲ್ಲಕಂಬ ಪ್ರದರ್ಶನ
Next articleಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮ ಸಿದ್ಧತೆ ಪರಿಶೀಲಿಸಿದ ಕೇಂದ್ರ ಸಚಿವ ಜೋಶಿ