ಮಂತ್ರಾಲಯದ ಶ್ರೀರಾಯರ ಕಾಣಿಕೆ ಹುಂಡಿಯಲ್ಲಿ 2.90 ಕೋಟಿ ರೂ. ಹಣ ಸಂಗ್ರಹ

0
11
ಮಂತ್ರಾಲಯ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀರಾಯರ ಹುಂಡಿಗೆ ಭಕ್ತರು ಹಾಕಿರುವ ಕಾಣಿಕೆಯು ಒಟ್ಟು 33 ದಿನಗಳಲ್ಲಿ 35 ಗ್ರಾಂ, ಚಿನ್ನ, ಒಂದು ಕೆಜಿ ಬೆಳ್ಳಿ, 2.90 ಕೋಟಿ ರೂ. ಹಣ ಸಂಗ್ರಹವಾಗಿದೆ.
ಬುಧವಾರದಿಂದ ಶ್ರೀರಾಯರ ಹುಂಡಿಯ ಹಣ ಎಣಿಕೆ ಆರಂಭಿಸಲಾಗಿತ್ತು. 2,84,79,589 ರೂ.ಗಳಷ್ಟು ನೋಟುಗಳು, 5,57,260 ರೂ.ಗಳಷ್ಟು ನಾಣ್ಯಗಳು ಸೇರಿದಂತೆ ಒಟ್ಟು 2,90,36,849 ರೂಪಾಯಿಗಳು ಹಣ ಸಂಗ್ರಹವಾಗಿದೆ. ಅಲ್ಲದೇ 35 ಗ್ರಾಂ ಚಿನ್ನ, 1ಕೆಜಿ 228 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆ ಹುಂಡಿಯಲ್ಲಿ ಹಾಕಿದ್ದಾರೆ ಎಂದು ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದೆ.

Previous articleಟಾವೆಲ್ ಹಾಕುವ ಸಂಸ್ಕೃತಿ ಹೋಗಲಿ: ದಾನಿಗೊಂಡ
Next articleಕಾಂಗ್ರೆಸ್‌ಗೆ ಬಗಲ್ ಮೇ ದುಷ್ಮನ್…!