ಮಂಡ್ಯದ ಮೈಶುಗರ್‌ಗೆ ಚಾಲನೆ

0
24

ಮಂಡ್ಯ: 2023-24ನೇ ಸಾಲಿನ ಕಬ್ಬು ನುರಿಯುವ ಹಂಗಾಮಿಗೆ ಸಕ್ಕರೆ ಸಚಿವರು ಚಾಲನೆ ನೀಡಿದ್ದು ಮಂಡ್ಯದ ಮೈಷುಗರ್ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಸಾಂಕೇತಿಕವಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಚಾಲನೆ ನೀಡಿದರು. ಕಾರ್ಖಾನೆಯಲ್ಲಿ ಗಣಪತಿ ಹೋಮ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡುವುದರೊಂದಿಗೆ ಕಾರ್ಖಾನೆಗೆ ಚಾಲನೆ ನೀಡಲಾಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆ ಪ್ರತಿ ನಿತ್ಯ 3 ಸಾವಿರದಿಂದ 4 ಸಾವಿರ ಟನ್ ಕಬ್ಬು ಅರೆಯದಿದ್ದರೆ ಎಂದಿಗೂ ಕಾರ್ಖಾನೆಯನ್ನು ಪುನಶ್ಚೇತನ ಮಾಡಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಕಾರ್ಖಾನೆಯನ್ನು ಕಬ್ಬು ಅರೆಯುವುದಕ್ಕೆ ಸಜ್ಜುಗೊಳಿಸಲಾಗಿದೆ ಎಂದರು.

Previous articleತಾಮ್ರಕ್ಕಾಗಿ ಲಾರಿ ಚಾಲಕನ ಕೊಲೆ
Next articleಇತಿಹಾಸವೇ ಇಲ್ಲದವರು ಪರರ ಇತಿಹಾಸವನ್ನು ಅಳಿಸಲು ಹೊರಟಿದ್ದಾರೆ