ಭಯಾನಕ ಭವಿಷ್ಯ ನುಡಿದ ಕೋಡಿಮಠದ ಶ್ರೀ!

0
19

ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ, ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತೆ ಎಂದು ಹೇಳಿದ್ದೆ ಅದರಂತೆ ರೈಲು ದುರಂತ ನಡೆದಿದೆ, ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ ಎಂದು ಕೋಲಾರದಲ್ಲಿ ಕೋಡಿ ಮಠದ ಶ್ರೀ ಡಾ.ಶಿವಾನಂದ ಶಿವಯೋಗಿ ಮಹಾಸ್ವಾಮೀಜಿ ಹೇಳಿದರು. ಕೋಲಾರ ತಾಲ್ಲೂಕಿನ ಸುಗಟೂರು ಗ್ರಾಮದ ಶ್ರೀ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಅಚಾನಕ್ಕಾಗಿ ಗುಡುಗು ಮಿಂಚು, ಬರಲಿದೆ, ಎರಡು ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಡೆಯಾಗಲಿದೆ ಎಂದು ಭವಿಷ್ಯ ನುಡಿದದರು. ಪ್ರಕೃತಿ ವಿಕೋಪವಲ್ಲದೆ ಎಲ್ಲೋ ನಡೆದ ಬಾಂಬ್ ದಾಳಿಯಿಂದ ನಮ್ಮ ದೇಶಕ್ಕೂ ಅನಾಹುತ ಸಂಭವಿಸಲಿದೆ ಎಂದರು.
ಆಧ್ಯಾತ್ಮಿಕವಾಗಿ ಆಡಳಿತ ನಡೆಸುವವರಿಗೆ ಒಳ್ಳೆಯದಾಗಲಿ. ಆದ್ಯಾತ್ಮ ಬಿಟ್ಟು ಹೋದವರಿಗೆ ದೈವವೆ ಉತ್ತರ ನೀಡಲಿದೆ ಎಂದು ನುಡಿದರು. ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ, ಅಂತಹ ಸೂಚನೆ ಈಗಾಗಲೆ ಸಿಕ್ಕಿದೆ ಎಂದು ಅವರು ಹೇಳಿದರು.

Previous articleಶಾಸಕರಿಗೆ ಲೋಕಸಭೆ ಚುನಾವಣೆಯ ಗುರಿ
Next articleಪಾಲಿಶ್‌ ಮಾಡುವ ನೆಪದಲ್ಲಿ ಬಂಗಾರ ಅಪಹರಣ