ಬ್ರೇನ್‌ ಟ್ಯೂಮರ್‌ನಿಂದ ಮೃತಪಟ್ಟ ಮಹಿಳೆಯ ಅಂಗಾಂಗ ರವಾನೆ

0
14

ಚಿಕ್ಕಮಗಳೂರು: ಬ್ರೇನ್‌ ಟ್ಯೂಮರ್‌ನಿಂದ ಸಾವನ್ನಪ್ಪಿದ ಮಹಿಳೆಯ ಅಂಗಾಂಗ ರವಾನೆ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆಯಲಾಗಿದೆ. ಬ್ರೇನ್‌ ಟ್ಯೂಮರ್‌ನಿಂದ ಸಾವನ್ನಪ್ಪಿದ ಸಹನಾ ಮೊಸೆಸ್ ಎಂಬಾಕೆಯ ಅಂಗಾಂಗಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ಬೆಂಗಳೂರು ಹಾಗೂ ಮಂಗಳೂರಿಗೆ ಶಿಫ್ಟ್ ಮಾಡಲಾಯಿತು.
ಕಾಂಗ್ರೆಸ್ ಜಿಲ್ಲಾ ವಕ್ತಾರ, ನಗರಸಭೆ ಮಾಜಿ ಸದಸ್ಯ ರೂಬೆನ್ ಮೊಸಸ್ ಪತ್ನಿ ಸಹನಾ ಅವರು ಬ್ರೇನ್‌ ಟ್ಯೂಮರ್‌ನಿಂದ ಬಳಲುತ್ತಿದ್ದರು. ಅವರ ಕಣ್ಣು, ಕಿಡ್ನಿ ಹಾಗೂ ಲಿವರ್ ಸೇರಿ ಒಟ್ಟು ಐದು ಅಂಗಗಳನ್ನು ಬೆಂಗಳೂರು, ಮಂಗಳೂರಿಗೆ ರವಾನೆ ಮಾಡಲಾಯಿತು
ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ರವಾನೆ ಮಾಡಿದ ಮೊದಲ ಜಿಲ್ಲೆ ಚಿಕ್ಕಮಗಳೂರು ಎಂಬ ಖ್ಯಾತಿ ಪಡೆದಿದ್ದು, ಒಂಬತ್ತು ತಿಂಗಳ ಹಿಂದೆ ಯುವತಿ ರಕ್ಷಿತಾಬಾಯಿ ಅಂಗಾಂಗಗಳನ್ನು ಬೆಂಗಳೂರಿಗೆ ರವಾನಿಸಲಾಗಿತ್ತು.

Previous articleನನ್ನ ಬಳಿಯೂ ಪೆನ್‌ಡ್ರೈವ್‌ ಇವೆ
Next articleಸೌಜನ್ಯ ಪ್ರಕರಣ: ಹಿಂದೂ ಸಂಘಟನೆಗಳಿಂದ ದೈವ, ದೇವರ ಮೊರೆ