ಬ್ರಾಹ್ಮಣ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ: ದಿನೇಶ್ ಗುಂಡೂರಾವ್

0
21

ರಾಜಾಜಿನಗರ(ಬೆಂಗಳೂರು): ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ವತಿಯಿಂದ ಶಂಕರ ಸೇವಾ ಸಮಿತಿಯಲ್ಲಿ ಚುನಾಯಿತ ವಿಪ್ರ ಶಾಸಕರಿಗೆ ಮತ್ತು ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಸನ್ಮಾನ ಸಮಾರಂಭ ಜರುಗಿತು.
ಈ ವೇಳೆ ಸಚಿವರಾದ ದಿನೇಶ್ ಗುಂಡೂರಾವ್ ರವರು, ಶಾಸಕರಾದ ವಿಶ್ವಾಸ್ ವೈದ್ಯ, ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಗೋವಿಂದ ಕುಲಕರ್ಣಿರವರು, , ಮಿಶ್ರ ಪೇಡಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸಂಜಯ್ ಮಿಶ್ರ, ಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಪ್ರದೀಪ್, ಬ್ರಾಹ್ಮಣ ಸಮುದಾಯದ ಹಿರಿಯ ಮುಖಂಡರಾದ ಲಕ್ಷ್ಮೀಕಾಂತ್, ಸಂಘದ ಸದಸ್ಯರಾದ ರಾಘವೇಂದ್ರಮಯ್ಯರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಸಚಿವ ದಿನೇಶ್ ಗುಂಡೂರಾವ್ ರವರು ಮಾತನಾಡಿ, ನಮ್ಮ ಸಮಾಜದ ಪ್ರತಿನಿಧಿಯಾಗಿ ಸರ್ಕಾರದಲ್ಲಿ ಇದ್ದೀನಿ. ಬ್ರಾಹ್ಮಣ ಸಮುದಾಯದ ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸುತ್ತೇನೆ. ಎಲ್ಲ ಸಮಾಜದವರ ಜೊತೆಯಲ್ಲಿ ಉತ್ತಮ ಬಾಂಧವ್ಯದಿಂದ ಸಾಗಬೇಕು. ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದರು.
ನಮ್ಮ ಸರ್ಕಾರ ಇಂದು 5ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ ಈ ಯೋಜನೆಗಳು ಎಲ್ಲ ವರ್ಗ ,ಧರ್ಮದವರಿಗೆ ತಲುಪುತ್ತದೆ. ಬಡವರ ಉಪಯೋಗವಾಗವ ಇಲಾಖೆ ಎಂದರೆ ಆರೋಗ್ಯ ಇಲಾಖೆ ನನಗೆ ಕೊಟ್ಟಿದೆ. ಬ್ರಾಹ್ಮಣ ಸಮಾಜ ಏಳಿಗೆಗಾಗಿ ಶ್ರಮಿಸುವೆ ಎಂದು ಹೇಳಿದರು.
ಶಾಸಕ ವಿಶ್ವಾಸ್ ವೈದ್ಯರವರು ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಇಂದು ವಿಶೇಷದಿನ. ನನ್ನ ಕುಟುಂಬದವರು ಯಾರು ರಾಜಕೀಯದಲ್ಲಿ ಇಲ್ಲ. ನನ್ನ ವೈಯಕ್ತಿಕ ಕೆಲಸದ ಮೇಲೆ ಅಧಿಕಾರಿಯ ಬಳಿ ಹೋದಾಗ ಅವರ ಕೆಲಸ ಮಾಡಲಿಲ್ಲ, ರಾಜಕೀಯ ಕ್ಷೇತ್ರದಿಂದ ಮಾತ್ರ ಜನರ ಸಮಸ್ಯೆ ನಿವಾರಣೆ ಮಾಡಲು ಸಾಧ್ಯ ಎಂದು ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದೆ. ನನ್ನ ಕ್ಷೇತ್ರದಲ್ಲಿ 2ಸಾವಿರ ಬ್ರಾಹ್ಮಣ ಸಮುದಾಯದ ಮತದಾರರು ಇದ್ದಾರೆ. ಸೌದತ್ತಿ ಕ್ಷೇತ್ರದ ಜನರ ಪ್ರೀತಿ ವಿಶ್ವಾಸ, ಆಶೀರ್ವಾದದ ಫಲದಿಂದ 70ಸಾವಿರ ಅಧಿಕ ಮತಗಳಿಂದ ಜಯಗಳಿಸಿದೆ ಎಂದು ಹೇಳಿದರು.
ಗೋವಿಂದ ಕುಲಕರ್ಣಿರವರು ಮಾತನಾಡಿ, ದೇಶದ 22ರಾಜ್ಯಗಳಲ್ಲಿ ಬ್ರಾಹ್ಮಣ ಸಮುದಾಯದ ಸಂಘಟನೆ ಮಾಡುತ್ತಿದೆ. ಬ್ರಾಹ್ಮಣ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯ ಎದುರಿಸಲು ನಮ್ಮ ಸಂಘಟನೆ ರೂಪಗೊಂಡಿದೆ. ದೇಶದಲ್ಲಿ ಇರುವ ಎಲ್ಲ ಬ್ರಾಹ್ಮಣರನ್ನ ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ನಮ್ಮದು. ಹಕ್ಕು ಮತ್ತು ಅಧಿಕಾರ ಪಡೆಯಲು ರಾಜಕೀಯ ವ್ಯವಸ್ಥೆಯಿಂದ ಮಾತ್ರ ಸಾಧ್ಯ ಅದರಿಂದ ರಾಜಕೀಯ ಕ್ಷೇತ್ರದಲ್ಲಿ ಬ್ರಾಹ್ಮಣರಿಗೆ ಹೆಚ್ಚಿನ ಅವಕಾಶ ಸಿಗುವಂತೆ ಮಾಡಲು ನಮ್ಮ ಸಂಘಟನೆ ಶ್ರಮಿಸುತ್ತಿದೆ. ಶಿಕ್ಷಣದಿಂದ ಬ್ರಾಹ್ಮಣರು ದೂರ ಉಳಿಯುತ್ತಿದ್ದಾರೆ, ಶಿಕ್ಷಣದಲ್ಲಿ ಬ್ರಾಹ್ಮಣ ಅವಕಾಶ ಸಿಗುವಲ್ಲಿ ಹೋರಾಟ ಮಾಡುತ್ತಿದೆ. ಬ್ರಾಹ್ಮಣ ಸಮಾಜ ಆರ್ಥಿಕವಾಗಿ ಸಬಲರಾಗಿ ಮಾಡಲು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ಸಹಕಾರ ನೀಡುತ್ತದೆ ಎಂದು ಹೇಳಿದರು.
ಲಕ್ಷ್ಮೀಕಾಂತ್ ರವರು ಮಾತನಾಡಿ, ಬ್ರಾಹ್ಮಣ ಸಮುದಾಯ ಸಂಘಟನೆಯಾಗಬೇಕು ವಿಧಾನಸಭೆ, ಬಿಬಿಎಂಪಿ ಮತ್ತು ಜಿಲ್ಲಾ, ತಾಲ್ಲೂಕು ಪಂಚಾಯಿತಿ ಎಲ್ಲ ಕಡೆಗಳಲ್ಲಿ ನಮ್ಮ ಜನಾಂಗದ ಜನಪ್ರತಿನಿಧಿಗಳು ಹೆಚ್ಚಿನ ರೀತಿಯಲ್ಲಿ ಆಯ್ಕೆಯಾಗಬೇಕು. ನಮ್ಮಲ್ಲಿ ಭೇದಬಾವ ಇರಬಾರದು ನಾವೆಲ್ಲರು ಒಂದೇ ಎಂದು ಸಾಗಬೇಕು ಎಂದು ಹೇಳಿದರು.
ರಾಘವೇಂದ್ರಮಯ್ಯರವರು ಮಾತನಾಡಿ, ಬ್ರಾಹ್ಮಣರು ರಾಜಕೀಯದಲ್ಲಿ ನೆಲೆ ಕಂಡಿಕೊಳ್ಳಲು ಸಂಘಟನೆ ಮಾಡಲಾಗಿದೆ. ರಾಜಕೀಯದಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿನಿಧಿಗಳು ಹೆಚ್ಚು ಬರಬೇಕು ಎಂದು ನಮ್ಮ ಪ್ರಯತ್ನ. ಬ್ರಾಹ್ಮಣ ಸಮಾಜದವರು ಎಲ್ಲರು ಒಗ್ಗಟ್ಟಾಗಿ ಸೇರಿಸಿ ರಾಜಕೀಯವಾಗಿ ಸಂಘಟಿತರಾಗಬೇಕು 2023ವಿಧಾನಸಭಾ ಚುನಾವಣೆಯಲ್ಲಿ 33ಜನರು ಸ್ಪರ್ಧೆ ಮಾಡಿದ್ದರು, 11ಜನರು ವಿಜಯಶಾಲಿಯಾಗಿದ್ದಾರೆ. ಪ್ರತಿಯೊಬ್ಬ ಬ್ರಾಹ್ಮಣರು ಅಂತರಿಕ ಕಚ್ಚಾಟ ಬಿಟ್ಟು ಎಲ್ಲರು ಒಟ್ಟಾಗಿ ಸಾಗಬೇಕು ಎಂದು ಹೇಳಿದರು.
ಸಚಿವರಾದ ದಿನೇಶ್ ಗುಂಡೂರಾವ್ ,ಶಾಸಕರಾದ ವಿಶ್ವಾಸ್ ವೈದ್ಯ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅರುಣ್ ಕುಮಾರ್ ಪುತ್ತಿಲ,ಅನೂಪ್ ಅಯ್ಯಂಗಾರ್, ರಾಘವೇಂದ್ರ ಮೋಕ್ಷಗುಂಡಂ ಗುರೂಜಿ, ಸುಧಾಕರ್ ಬಾಲ್ಕರ್, ರಾಮದಾಸ್ ಭಟ್, ಸತ್ಯಲಕ್ಷ್ಮೀ ರಾವ್ ರವರಿಗೆ ಸನ್ಮಾನಿಸಲಾಯಿತು.
ಸಂಘಟನೆಯ ಅಜಯ್ ಶಾಸ್ತ್ರಿ, ಕರಿಗಿರೀಶ್, ರಾಘವೇಂದ್ರ ಅಲಗೂರ್,ಪ್ರದೀಪ್, ರಾಮು ಮಂಜುನಾಥ್ ಭಟ್, ಸತೀಶ್ ವಿನಾಯಕ ಕುಲಕರ್ಣಿ ನಾರಾಯಣ ಆಚಾರ್ಯ ವೆಂಕಟೆಶ ಕುಲಕರ್ಣಿ, ಮುರಳಿಧರ ಕರಲಗಿಕರ, ವೀರೆಶ ಕುಲಕರ್ಣಿ ಮುಂತಾದವರು ಪಾಲ್ಗೊಂಡಿದ್ದರು.

Previous articleರೈಲು ದುರಂತ: ಚಿಕ್ಕಮಗಳೂರಿನ 110 ಜನ ಸುರಕ್ಷಿತ
Next articleಶೋಭಕ್ಕಂಗೂ ಫ್ರೀ: ಕಾಂಗ್ರೆಸ್‌ನ ದುರಹಂಕಾರ