ಶಿರಸಿ: ನಾವು ಬ್ರಾಹ್ಮಣ ಎಂದು ಹೇಳಲು ಯಾವುದೇ ಬೇಸರ ಇಲ್ಲ. ಬ್ರಾಹ್ಮಣ ಹೇಳಿ ಅರ್ಜಿ ಹಾಕಿ ಹುಟ್ಟಿಲ್ಲ. ಅದೇ ವಿಷಯ ಆಧರಿಸಿ ಅಧಿಕಾರ ಕೇಳಿಲ್ಲ. ಅಧಿಕಾರ, ಹುದ್ದೆ ಅವಕಾಶ ಸಿಕ್ಕರೆ ನಿಭಾಯಿಸುವ ಸಾಮರ್ಥ್ಯ ಇದೆ ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ಬುಧವಾರ ಮಧ್ಯಾಹ್ನ ಶಿರಸಿಯಲ್ಲಿ ಕದಂಬೋತ್ಸವ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.