ಬೇರೆಯವರ ಮಾತಿಗೆ ಪ್ರತಿಕ್ರಿಯಿಸುವುದು ಟೈಂ ವೇಸ್ಟ್

0
27
ಲಕ್ಷ್ಮೀ

ಬೆಳಗಾವಿ: ”ನಾನು ಬಹಳ ಶಾಂತ ರೀತಿಯಿಂದ ಚುನಾವಣೆ ಮಾಡಬೇಕೆದಿಂದ್ದೇನೆ. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಜನರೇ ತೀರ್ಮಾನ ತೆಗೆದುಕೊಂಡು ಇದಕ್ಕೆಲ್ಲ ಉತ್ತರಿಸುತ್ತಾರೆ” ಶಾಸಕ ರಮೇಶ ಜಾರಕಿಹೊಳಿ ಶುಕ್ರವಾರ ಸುಳೇಬಾವಿಯ ಸಮಾವೇಶದಲ್ಲಿ ಆಡಿದ ಮಾತುಗಳಿಗೆ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಿದಾಗ ಅವರು ಅತ್ಯಂತ ಶಾಂತವಾಗಿಯೇ ಉತ್ತರಿಸಿದರು.
ನನ್ನ ಅಭಿವೃದ್ಧಿ ನೋಡಿ ಜನ ನನ್ನನ್ನು ಒಪ್ಪಿಕೊಂಡಿದ್ದಾರೆ. ಬೇರೆಯವರ ಮಾತಿಗೆಲ್ಲ ಪ್ರತಿಕ್ರಿಯಿಸಲು ನನಗೆ ಸಮಯವೂ ಇಲ್ಲ. ಟೈಂ ವೇಸ್ಟ್ ಮಾಡಲು ಇಷ್ಟವೂ ಇಲ್ಲ. ಆದರೂ ನೀವು ಬಂದು ಕೇಳುತ್ತಿದ್ದೀರಿ ಎಂದು ಉತ್ತರಿಸುತ್ತಿದ್ದೇನೆ. ಯಾರು ಯಾವ ರೀತಿ ಇದ್ದಾರೆ, ಒಬ್ಬ ಮಹಿಳೆಯ ಬಗ್ಗೆ ಹೇಗೆಲ್ಲ ಮಾತನಾಡುತ್ತಾರೆ ಎನ್ನುವುದನ್ನು ಸಮಾಜಕ್ಕೆ ನೀವು ತೋರಿಸುತ್ತಿರುವುದಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಬಿಜೆಪಿಗೆ ಮತ ಹಾಕಲು ಒಬ್ಬರಿಗೆ ಆರು ಸಾವಿರ ರೂ. ಉಡುಗೊರೆ ಕೊಡುವುದಾಗಿ ರಮೇಶ ಜಾರಕಿಹೊಳಿ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ, ರಾಜ್ಯದಲ್ಲಿ ಕಾನೂನು ಇದೆ, ಚುನಾವಣೆ ಆಯೋಗ ಇದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಇದನ್ನೆಲ್ಲ ನೋಡಿ ಅವರ ಪಕ್ಷ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ನಾನು ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದರು.

Previous article`ಕಾಂಗ್ರೆಸ್ ಸಿಎಂ ಗಾದಿ ಈಗಲೇ ಚರ್ಚೆ ಬೇಡ’
Next articleಗಣರಾಜ್ಯೋತ್ಸವ ನೌಕಾಪಡೆಯ ತುಕಡಿ ಮುನ್ನಡೆಸಲಿರುವ ಕನ್ನಡದ ಕುವರಿ