ಬೆಳಗಾವಿ: ಸ್ಟಾಲಿನ್ ವಿರುದ್ಧ ಕ್ರಮಕ್ಕೆ ಬ್ರಾಹ್ಮಣ ಮಹಾಸಭಾ ಒತ್ತಾಯ

0
15

ಬೆಳಗಾವಿ. ಎಕೆಬಿಎಂಎಸ್ ಅಧ್ಯಕ್ಷರ ಸೂಚನೆ ಹಿನ್ನೆಲೆಯಲ್ಲಿ ತಮಿಳುನಾಡಿನ ಡಿಎಂಕೆ ಸಚಿವ ಉದಯನಿಧಿ ಸ್ಡಾಲಿನ್ ವಿರುದ್ಧ ಪ್ರಕರಣ ದಾಖಲಿಸಿ‌‌ ಕ್ರಮ‌ ತೆಗೆದುಕೊಳ್ಳಬೇಕೆಂದು‌ ಮನವಿ ಟಿಳಕವಾಡಿ ಠಾಣೆಯ ಸಿಪಿಐ ದಯಾನಂದ ಶೇಗುಣಸಿ ಅವರಿಗೆ ಮನವಿ ಪತ್ರ ಅರ್ಪಿಸಲಾಯಿತು.
ಸ್ಟಾಲಿನ್ ಅವರ‌ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಪ್ರಕಾರ ಪ್ರಕರಣ ದಾಖಲು ಮಾಡಿ ಕ್ರಮ‌ ಜರುಗಿಸಬೇಕೆಂದು ಮನವಿ ಮಾಡಿಕೊಳ್ಳಲಾಯಿತು‌.
ಎಕೆಬಿಎಂಎಸ್ ಸಂಘಟನಾ ಕಾರ್ಯದರ್ಶಿಗಳಾದ ವಿಲಾಸ ಜೋಶಿ, ಪ್ರಿಯಾ ಪುರಾಣಿಕ, ಮಹಾನಗರ ಪಾಲಿಕೆಯ ನಗರಸೇವಕಿ ವಾಣಿ ಜೋಶಿ. ಅರವಿಂದ ಹುನಗುಂದ, ಅನಿಲ ಕುಲಕರ್ಣಿ, ಅಕ್ಷಯ ಕುಲಕರ್ಣಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Previous articleಬಾಲಕಿ ಭೇಟಿಯಾದ ಸಿದ್ದರಾಮಯ್ಯ
Next articleಸರ್ಕಾರಗಳ‌ ನಡೆ ಖಂಡಿಸಿ ರೈತರಿಂದ ತಮಟೆ ಪ್ರತಿಭಟನೆ